ಭಾರತದ ಚೆಸ್ ಪ್ರತಿಭೆ ಪ್ರಜ್ಞಾನಂದ ಪೋಸ್ಟ್: ಸದಾ ಬೆಂಬಲಿಸುವ ಅಮ್ಮನ ಜೊತೆಗೆ
ಚೆನ್ನೈ (ತಮಿಳುನಾಡು) : ಫಿಡೆ ವಿಶ್ವಕಪ್ ಚೆಸ್ ಚಾಂಪಿಯನ್‌ಶಿಪ್ ಟೂರ್ನಿಯ ಫೈನಲ್‌ನಲ್ಲಿ ಬೆಳ್ಳಿ ಪದಕ ಗೆದ್ದ ತಮಿಳುನಾಡಿನ ಆಟಗಾರ ಆರ್.ಪ್ರಜ್ಞಾನಂದ, ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ವೊಂದನ್ನು ಮಾಡಿದ್ದು, ಪ್ರೋತ್ಸಾಹ ಹಾಗೂ ಬೆಂಬಲ ನೀಡಿದ ಎಲ್ಲರಿಗೂ, ಅದ್ರಲ್ಲೂ ವಿಶೇಷವಾಗಿ ತಾಯಿ ಆರ್.ನಾಗಲಕ್ಷ್ಮಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.”ನಾನು ಚೆಸ್ ವಿಶ್ವಕಪ್ ಫೈನಲ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದೇನೆ. ಮುಂದಿನ ವರ್ಷದ ಸ್ಪರ್ಧೆಗೆ ಅರ್ಹತೆ ಪಡೆದಿದ್ದೇನೆ. ನಿಮ್ಮ ಪ್ರೀತಿ, ಬೆಂಬಲ ಮತ್ತು ಪ್ರಾರ್ಥನೆಗಳಿಗಾಗಿ ನಾನು ಕೃತಜ್ಞ. ಶುಭ ಹಾರೈಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ವಿಶೇಷವಾಗಿ, […]