ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಬ್ರೇಕ್ ದೋಷ 12 ನಿಮಿಷ ರೈಲು ಸ್ಥಗಿತ
ವೆಲ್ಲೂರ್( ಚೆನ್ನೈ):ಚೆನ್ನೈನಿಂದ ಬೆಂಗಳೂರಿಗೆ ಹೋಗುತ್ತಿದ್ದ ಡಬಲ್ ಟಕ್ಕರ್ ಎಕ್ಸ್‌ಪ್ರೆಸ್ ವಿನ್ನಮ್ಮಗಲಂ ಪ್ರದೇಶದ ಪಕ್ಕದ ಕಡಪಾಡಿ ಊರನ್ನು ಹಾದುಹೋಗುತ್ತಿತ್ತು. ಆಗ ಇದ್ದಕ್ಕಿದ್ದಂತೆ ಸಿ6 ಬಾಕ್ಸ್ ನಿಂದ ಹೊಗೆ ಬರಲಾರಂಭಿಸಿದೆ. ಹೆಚ್ಚಿನ ಅಪಾಯ ಸಂಭವಿಸುವುದಕ್ಕೂ ಮುನ್ನ ತಕ್ಷಣವೇ ರೈಲನ್ನು ನಿಲ್ಲಿಸಲಾಯಿತು. ಚಲಿಸುತ್ತಿದ್ದ ರೈಲಿನಿಂದ ಹೊಗೆ ಬರುತ್ತಿದ್ದರಿಂದ ರೈಲಿನಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡರು. ರೈಲು ತಕ್ಷಣವೇ ನಿಂತ ಕಾರಣ ಪ್ರಯಾಣಿಕರು ಕೂಡ ಕೆಳಗಿಳಿದು, ಸಿಬ್ಬಂದಿ ಜೊತೆ ಸೇರಿ ಹೊಗೆ ಬರುತ್ತಿದ್ದ ಜಾಗವನ್ನು ಹುಡುಕಾಡಿದ್ದಾರೆ. ತಕ್ಷಣವೇ ರೈಲ್ವೇ ಸಿಬ್ಬಂದಿ ಇಂಜಿನ್ ದುರಸ್ತಿಗೊಳಿಸಿದ ಕಾರಣ, ಸುಮಾರು […]