ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ರಥೋತ್ಸವ ಸಂಭ್ರಮ

ಉಡುಪಿ: ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಶ್ರೀ ಮಹಿಷಮರ್ದಿನಿ ದೇವಿಯ ವಾರ್ಷಿಕ ರಥೋತ್ಸವವು ಮಾ. 7ರಂದು ಪಾಡಿಗಾರು ಶ್ರೀನಿವಾಸ ತಂತ್ರಿಯವರ ನೇತೃತ್ವದಲ್ಲಿ ಜರಗಿತು. ರಥಾರೋಹಣ, ಸಾರ್ವಜನಿಕ ಅನ್ನ ಸಂತರ್ಪಣೆ, ದಾಮೋದರ ಸೇರಿಗಾರ್ ಇವರಿಂದ ಸ್ಯಾಕ್ಸೋಫೋನ್ ವಾದನ, ಮನ್ಮಹಾರಥೋತ್ಸವ, ವೈವಿಧ್ಯಮಯ ಯಕ್ಷಗಾನ ವೇಷಗಳ ಮೆರವಣಿಗೆ, ಹಚ್ಚಡ ಸೇವೆ, ಉಂಡಾರು ಚೆಂಡೆ ಬಳಗದವರಿಂದ ಚೆಂಡೆ ವಾದನ, ಕ್ರೇಜಿ ಕಿಡ್ಸ್, ಸ್ಥಳೀಯರಿಂದ ನೃತ್ಯ ವೈಭವ, ಸನ್ನಿಧಿ ಕಲಾವಿದರಿಂದ ತುಳು ನಾಟಕ ಅಪ್ಪೆ ಮಂತ್ರ ದೇವತೆ ನಡೆಯಿತು. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ […]