ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ: ದೇಶಾದ್ಯಂತ 2,877 ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ ಮಂಜೂರು
ನವದೆಹಲಿ: ಫೇಮ್ ಇಂಡಿಯಾ ಯೋಜನೆಯ ಹಂತ-2 ಅಡಿಯಲ್ಲಿ ದೇಶಾದ್ಯಂತ 2,877 ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ಗಳನ್ನು ಮಂಜೂರು ಮಾಡಲಾಗಿದೆ. ಸರ್ಕಾರವು 25 ರಾಜ್ಯ ಹಾಗೂ ಎಲ್ಲಾ ಕೇಂದ್ರಾಡಳಿತ ಪ್ರದೇಶಗಳ 68 ನಗರಗಳಲ್ಲಿ 2,877 ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ಗಳನ್ನು ಮಂಜೂರು ಮಾಡಿದೆ. ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆ ಮತ್ತು ತಯಾರಿಕೆ(ಫೇಮ್) ಯೋಜನೆಯಡಿ ಇವುಗಳನ್ನು ಮಂಜೂರು ಮಾಡಲಾಗಿದೆ. ಭಾರೀ ಕೈಗಾರಿಕೆಗಳ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜರ್ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ. ಫೇಮ್ ಇಂಡಿಯಾ […]