ಪ.ಜಾತಿ, ಪಂಗಡ ವಿದ್ಯಾರ್ಥಿನಿಲಯ ಸೇರ್ಪಡೆಗೆ ಅರ್ಜಿ ಆಹ್ವಾನ
ಉಡುಪಿ, ಮೇ 15: 2019-20 ನೇ ಸಾಲಿಗೆ ಉಡುಪಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಹಾಗೂ ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ವಿದ್ಯಾರ್ಥಿಗಳ ಸೇರ್ಪಡೆಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಪ.ಜಾತಿ ವಿದ್ಯಾರ್ಥಿ ನಿಲಯದ ವಿವರ: ಮೆಟ್ರಿಕ್ ಪೂರ್ವ ಗಂಡು ಮಕ್ಕಳ ವಸತಿ ನಿಲಯ ಕುಂಜಿಬೆಟ್ಟು, ಕೂರಾಡಿ, ಯಡ್ತಾಡಿ, ಪಡುಬಿದ್ರಿ, ಮೆಟ್ರಿಕ್ ಪೂರ್ವ ಹೆಣ್ಣು ಮಕ್ಕಳ ವಸತಿ ನಿಲಯ ಯಡ್ತಾಡಿ, ಕೂರಾಡಿ, ಕಾಪು, […]