ವ್ಯಂಗ್ಯಚಿತ್ರಕಾರರು ಯಾವಾಗಲೂ ಪ್ರತಿಪಕ್ಷದ ಸ್ಥಾನದಲ್ಲಿಯೇ ಇರುತ್ತಾರೆ:ಬಾದಲ್ ನಂಜುಂಡಸ್ವಾಮಿ

ಕುಂದಾಪುರ: ವ್ಯಂಗ್ಯಚಿತ್ರಕಾರರು ಯಾವಾಗಲೂ ಪ್ರತಿಪಕ್ಷದ ಸ್ಥಾನದಲ್ಲಿಯೇ ಇರುತ್ತಾರೆ. ವ್ಯಂಗ್ಯಚಿತ್ರಕಾರರಿಗೆ ನಾಯಕರು ಇಲ್ಲ. ಆದರೆ ಸ್ಪರ್ಧಿಗಳು ಇದ್ದಾರೆ. ದೇಶದ ರಾಜಕಾರಣಿಗಳಿಗಿಂತ ರಾಜಕಾರಣದ ಬಗ್ಗೆ ಹೆಚ್ಚು ತಿಳಿದುಕೊಂಡಿರುವ ವ್ಯಂಗ್ಯಚಿತ್ರಕಾರರು ಯಾಕೆ ರಾಜಕಾರಣಿಗಳಾಗಬಾರದು ಎಂದು ಹಲವು ಸಲ ಜಿಜ್ಞಾಸೆ ಮೂಡಿದೆ ಎಂದು ಬೆಂಗಳೂರಿನ ಪ್ರಸಿದ್ಧ ಸ್ಟ್ರೀಟ್ ಆರ್ಟ್ ಕಲಾವಿದ ಬಾದಲ್ ನಂಜುಂಡಸ್ವಾಮಿ ಹೇಳಿದರು. ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷೀನರಸಿಂಹ ಕಲಾಮಂದಿರದಲ್ಲಿ ಕಾರ್ಟೂನ್ ಬಳಗ ಕುಂದಾಪುರದ ಆಶ್ರಯದಲ್ಲಿ ನಡೆಯುತ್ತಿರುವ ‘ಕಾರ್ಟೂನ್ ಹಬ್ಬ’ ದ ಅಂಗವಾಗಿ ಭಾನುವಾರ ತಾಲ್ಲೂಕು ಕಾರ್ಯನಿರತ […]