ತ್ರಿಶಾ ಸಂಸ್ಥೆಯಲ್ಲಿ ಲೆಕ್ಕಪರಿಶೋಧಕರ ದಿನಾಚರಣೆ
ಉಡುಪಿ: ದೃಢ ವಿಶ್ವಾಸ ಮತ್ತು ಸತತ ಪರಿಶ್ರಮವಿದ್ದಾಗ ಮಾತ್ರ ಅತ್ಯಂತ ಗೌರವಯುತವಾದ ಸಿ.ಎ ಪದವಿ ಸಿಗಲು ಸಾಧ್ಯ. ಈ ಪದವಿಯನ್ನು ಪಡೆಯಲು ತರಬೇತಿ ಪಡೆಯುತ್ತಿರುವ ಪ್ರತಿಯೊಬ್ಬರೂ, ಶಕ್ತಿಯುತ ಮತ್ತು ಆರ್ಥಿಕವಾದ ಆರೋಗ್ಯಕರ ರಾಷ್ಟ್ರವನ್ನು ನಿರ್ಮಿಸಲು ಶ್ರಮಿಸಬೇಕು ಎಂದು ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಲೆಕ್ಕಪರಿಶೋಧಕ ಗೋಪಾಲಕೃಷ್ಣ ಭಟ್ ಹೇಳಿದರು. ಅವರು ಇತ್ತೀಚೆಗೆ ತ್ರಿಶಾ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಲೆಕ್ಕಪರಿಶೋಧಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಿ.ಎ ಕೇದರನಾಥ್ ಶೆಣೈ ಹಾಗೂ ಸಿ.ಎ ಆನಂದತೀರ್ಥ ಇವರು ತಾವು […]