ಕಟೀಲು ದೇವಳದ ಎದುರು ಹೊತ್ತಿ ಉರಿದ ಬಸ್: ಮೂವರು ಪ್ರಾಣಾಪಯದಿಂದ ಪಾರು
ಕಟೀಲು: ಇಲ್ಲಿನ ಪ್ರಸಿದ್ದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಮುಂದೆ ಎಂಆರ್‌ಪಿಎಲ್ ಕಂಪನಿಗೆ ಸೇರಿದ ಬಸ್ ಒಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಏಕಾಏಕಿ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಮೂವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಸುರತ್ಕಲ್ ಸಮೀಪದ ಓಎಂಪಿಎಲ್ ಗೆ ಸಿಬಂದಿಗಳನ್ನು ಕರೆದೊಯ್ಯುವ ಬಸ್ಸು ಮಧ್ಯಾಹ್ನ 2.45ರ ಸುಮಾರಿಗೆ ಕಟೀಲು ದೇವಸ್ಥಾನದ ಎದುರು ರಾಜ್ಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದು ಶಾರ್ಟ್ ಸರ್ಕ್ಯೂಟ್ ನಿಂದ ಏಕಾಏಕಿ ಹೊತ್ತಿ ಉರಿದಿದೆ ಎನ್ನಲಾಗಿದೆ. ಧಗಧಗಿಸುವ […]
ಮಂಗಳೂರು: ಸ್ಕೂಟರ್ ಗೆ ಬಸ್ ಡಿಕ್ಕಿ; ಬಾಲಕ ಸಾವು
ಮಂಗಳೂರು: ಇಲ್ಲಿನ ಲಾಲ್ ಬಾಗ್ ಸಿಗ್ನಲ್ ಬಳಿಯಲ್ಲಿ ಖಾಸಗಿ ಬಸ್ಸೊಂದು ವೇಗದಿಂದ ಬಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕನೊಬ್ಬನ ಮರಣ ಸಂಭವಿಸಿದೆ. ನೀರುಮಾರ್ಗದ ಧನು(13) ಎಂಬ ಬಾಲಕ ಮೃತಪಟ್ಟ ದುರ್ದೈವಿ. ತನ್ನ ಸಂಬಂಧಿ ಜೊತೆ ಸ್ಕೂಟರಿನಲ್ಲಿ ಹಿಂಬದಿ ಸವಾರನಾಗಿ ಹೋಗುತ್ತಿದ್ದ ವೇಳೆಯಲ್ಲಿ ಹಿಂದಿನಿಂದ ಬಂದ ಬಸ್ ಡಿಕ್ಕಿ ಹೊಡೆದದ್ದರಿಂದ ಸ್ಕೂಟರ್ ಚಲಾಯಿಸುತ್ತಿದ್ದ ಸಂಬಂಧಿ ಎಡಗಡೆಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಧನು ಬಲಗಡೆಗೆ ಬಿದ್ದಿದ್ದು, ಆತನ ಮೇಲೆ ಬಸ್ ನ ಚಕ್ರ ಹಾದು ಹೋಗಿದೆ. ಇದರಿಂದಾಗಿ […]
ಅಯೋಧ್ಯೆ ತೆರಳುವ ಮಾರ್ಗದಲ್ಲಿ ಬಸ್-ಟ್ರಕ್ ಮುಖಾಮುಖಿ: ಕರ್ನಾಟಕದ 7 ಪ್ರಯಾಣಿಕರು ಮೃತ್ಯುವಶ, 9 ಮಂದಿ ಗಾಯಾಳು
ಬಹ್ರೈಚ್: ಕರ್ನಾಟಕದಿಂದ 16 ಜನರನ್ನು ಅಯೋಧ್ಯೆಗೆ ಹೊತ್ತೊಯ್ಯುತ್ತಿದ್ದ ಬಸ್ ಒಂದು ಬಹ್ರೈಚ್‌ನ ಮೋತಿಪುರ್ ಪ್ರದೇಶದ ನಾನಿಹಾ ಮಾರುಕಟ್ಟೆಯಲ್ಲಿ ಟ್ರಕ್ ಒಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ 7 ಪ್ರಯಾಣಿಕರು ಅಸುನೀಗಿದ್ದು, 9 ಮಂದಿ ಗಾಯಗೊಂಡಿದ್ದಾರೆ ಎಂದು ಈ ಯುಪಿ ಪೊಲೀಸರು ತಿಳಿಸಿದ್ದಾರೆ. ಭಾನುವಾರ ಉತ್ತರ ಪ್ರದೇಶದ ಬಹ್ರೈಚ್-ಲಖಿಂಪುರ ಹೆದ್ದಾರಿಯಲ್ಲಿ ಪ್ರವಾಸಿ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದು ಮೂವರು ಮಹಿಳೆಯರು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಚಾಲಕ ಸೇರಿದಂತೆ ಐವರು ಸ್ಥಳದಲ್ಲೇ […]
ಬೆಂಗಳೂರಿನ ಕೆಂಗೇರಿಯಲ್ಲಿ ಬಸ್ ಅಫಘಾತ: 29 ಪ್ರಯಾಣಿಕರು ಗಾಯಾಳು
ಬೆಂಗಳೂರು: ಕೆಂಗೇರಿಯ ಮೈಸೂರು ರಸ್ತೆಯಲ್ಲಿ ಭಾನುವಾರ ರಾತ್ರಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತಕ್ಕೀಡಾಗಿ 29 ಜನರು ಗಾಯಗೊಂಡಿದ್ದಾರೆ ಎಂದು ಪಶ್ಚಿಮ ಬೆಂಗಳೂರಿನ ಡಿಸಿಪಿ ಡಾ ಸಂಜೀವ್ ಪಾಟೀಲ್ ಸುದ್ದಿ ಸಂಸ್ಥೆ ಎ ಎನ್ ಐ ಗೆ ತಿಳಿಸಿದ್ದಾರೆ. ಪ್ರಯಾಣಿಕರಲ್ಲಿ ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿದ್ದರೆ, ಉಳಿದವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ನಲ್ಲಿ 45 ಮಂದಿ ಪ್ರಯಾಣಿಕರಿದ್ದು ಮಡಿಕೇರಿಯಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದರು. Karnataka | 25 people received minor injuries and 4 were […]
ಸಾಲಿಗ್ರಾಮದಲ್ಲಿ ಸ್ಕೂಟರ್ ಗೆ ಬಸ್ ಢಿಕ್ಕಿ; ಸವಾರ ಸಾವು
ಕುಂದಾಪುರ: ಬಸ್ಸೊಂದು ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಸಾಲಿಗ್ರಾಮ ಆಂಜನೇಯ ದೇವಸ್ಥಾನದ ತಿರುವಿನ ಬಳಿ ನಡೆದಿದೆ. ಮೃತರನ್ನು ಬನ್ನಾಡಿ ಗ್ರಾಮದ ಬಡಾಬೆಟ್ಟು ಉಪ್ಲಾಡಿ ನಿವಾಸಿ 56 ವರ್ಷದ ಶೀನ ಪೂಜಾರಿ ಎಂದು ಗುರುತಿಸಲಾಗಿದೆ. ಮೇ 6ರಂದು ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಇವರ ಸ್ಕೂಟರ್‌ಗೆ ಉಡುಪಿ ಕಡೆಯಿಂದ ಕುಂದಾಪುರದ ಕಡೆಗೆ ಬರುತ್ತಿದ್ದ ಬಸ್ ಢಿಕ್ಕಿ ಹೊಡೆದಿದೆ. ಇದರಿಂದಾಗಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಶೀನ ಪೂಜಾರಿ, […]