ಕಾಸರಗೋಡು: ಸೌಟು ಹಿಡಿಯುವ ಕೈಗಳು ಬಸ್ ಸ್ಟೀರಿಂಗ್ ಕೂಡಾ ಹಿಡಿಯಬಹುದೆಂದು ತೋರಿದ ದಿಟ್ಟ ನಾರಿ ದೀಪಾ!!

ಕಾಸರಗೋಡು: ಶ್ರೀಕೃಷ್ಣ ಬಸ್ಸಿನ ಸ್ಟೀರಿಂಗ್ ಹಿಡಿದು ಯಾವುದೇ ಪುರುಷರಿಗೆ ಕಮ್ಮಿ ಇಲ್ಲದಂತೆ ಬಸ್ ಚಲಾಯಿಸುತ್ತಾರೆ ಆಡುಕಾತುವಾಯಲ್ ಮೂಲದ ಎನ್ ದೀಪಾ ಎಂಬ ದಿಟ್ಟ ನಾರಿ. ಮಹಿಳೆಯರು ಭಾರೀ ವಾಹನಗಳನ್ನು ಚಲಾಯಿಸಲು ಸಾಧ್ಯವಿಲ್ಲ ಎನ್ನುವ ಪೂರ್ವಾಗ್ರಹವನ್ನು ತೊಡೆದು ಹಾಕಿದ್ದಾರೆ 36 ವರ್ಷ ವಯಸ್ಸಿನ ದೀಪಾ. ಏರುತಗ್ಗಿನ ಗುಡ್ಡಗಾಡಿನ ವಕ್ರ ರಸ್ತೆಗಳಲ್ಲಿ ಪ್ರಯಾಣಿಕರಿಂದ ತುಂಬಿದ ಬಸ್ ಅನ್ನು ಸಲೀಸಾಗಿ ಓಡಿಸುವ ದೀಪಾ ತನ್ನ ಬಹುಕಾಲದ ಕನಸನ್ನು ನನಸಾಗಿಸಿದ್ದಾರೆ. ಇವರ ಕನಸಿಗೆ ಇಂಬು ನೀಡಿದವರು ಬಸ್ ಮಾಲಕ ನಿಶಾಂತ್. ಅನುಭವಿ ಮತ್ತು […]