ಜುಲೈ 5ರಿಂದ ರಾಜ್ಯಾದ್ಯಂತ ಪ್ರತಿ ಭಾನುವಾರ ಲಾಕ್ ಡೌನ್: ಕರ್ಫ್ಯೂ ಅವಧಿ ಕೂಡ ವಿಸ್ತರಣೆ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಇಂದು ಮುಖ್ಯಮಂತ್ರಿ ನಡೆಸಿದ ಸಭೆಯಲ್ಲಿ ಕೆಲವೊಂದು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಈ ಕೆಳಗಿನಂತಿವೆ. ಜುಲೈ 5ನೇ ತಾರೀಖಿನಿಂದ ಮುಂದಿನ ಆದೇಶದವರೆಗೆ ಪ್ರತಿ ಭಾನುವಾರ ರಾಜ್ಯಾದ್ಯಂತ ಲಾಕ್‍ಡೌನ್ ಮಾಡಲಾಗುವುದು. (ವಸ್ತುಗಳ ಸಾಗಾಣಿಕೆಗೆ ನಿರ್ಬಂದವಿಲ್ಲ). ಜುಲೈ 10ನೇ ತಾರಿಖಿನಿಂದ ಒಂದು ತಿಂಗಳ ಕಾಲ ಈಗಾಗಲೇ ರಜೆಯಿರುವ 2ನೇ ಹಾಗೂ 4ನೇ ಶನಿವಾರದ ಜೊತೆಗೆ ಉಳಿದ ಶನಿವಾರದಂದು ಎಲ್ಲಾ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯಕ್ಕೊಳಪಡುವ ಎಲ್ಲಾ ಕಛೇರಿಗಳಿಗೆ ರಜೆ […]