ಹಿಂದೂ ಧರ್ಮ ರಕ್ಷಕ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಯ ಅರ್ಥಪೂರ್ಣ ಆಚರಣೆ ನಡೆಯಬೇಕು -ವಿಜಯ್ ಕೊಡವೂರು
ಕೊಡವೂರು: ನಾರಾಯಣ ಗುರುಗಳ 168ನೇ ಜಯಂತಿಯನ್ನು ಕೊಡವೂರು ವಾರ್ಡಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ನಾರಾಯಣ ಗುರುಗಳು ಕಷ್ಟದಿಂದ ಇನ್ನೊಬ್ಬರ ಕಷ್ಟಕ್ಕೆ ಉತ್ತರ ಕೊಟ್ಟವರು. ನಮ್ಮ ಕಷ್ಟಗಳನ್ನು ಅರಿತು ಅದಕ್ಕೆ ಉತ್ತರ ಕೊಡಬೇಕು ಎಂದು ಕೊಡವೂರಿನ ಮಕ್ಕಳ ಸಮಿತಿ ಯೋಚಿಸಿ ಗಣೇಶ ಚತುರ್ಥಿಯ ದಿನ ಹುಲಿವೇಷ ಹಾಕಿ ಬಂದಿರುವಂತಹ ಧನಾತ್ಮಕ ಶಕ್ತಿಯನ್ನು ದೀನರಿಗೆ / ದುರ್ಬಲರಿಗೆ / ಅಂಗವಿಕಲರಿಗೆ/ ನೀಡುವಂತಹ ಕೆಲಸವನ್ನು ನಾರಾಯಣ ಗುರು ಜಯಂತಿಯ ದಿನ ಆಚರಿಸಲಾಯಿತು. ಗುರುಗಳು ಹಿಂದೂ ಧರ್ಮದ ಅನೇಕ ಅಂಕುಡೊಂಕುಗಳನ್ನು ಸುಧಾರಿಸಿದರು. ಮತಾಂತರ ಆಗಿರುವವರನ್ನು […]
ಬೆಳ್ಮಣ್: ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ನಟ ವಿಜಯ ರಾಘವೇಂದ್ರ ಭಾಗಿ
ಬೆಳ್ಮಣ್: ಶನಿವಾರದಂದು ಇಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಚಿತ್ರ ನಟ ವಿಜಯ ರಾಘವೇಂದ್ರ ಭಾಗವಹಿಸಿದರು. ಈ ಸಂದರ್ಭದಲ್ಲಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಅವರನ್ನು ಆದರದಿಂದ ಬರಮಾಡಿಕೊಂಡರು. ಬೆಳ್ಮಣ್ ಬಿಲ್ಲವರ ಸಂಘದ ವತಿಯಿಂದ ವಿಜಯ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.