ಐಎಂಎ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ಮಧುಮೇಹ ತಪಾಸಣೆ ಮತ್ತು ಅಂಗದಾನದ ಬಗ್ಗೆ ಮಾಹಿತಿ ಶಿಬಿರ
ಉಡುಪಿ: ವಿಶ್ವ ಮಧುಮೇಹ ದಿನಾಚರಣೆಯ ಹಾಗೂ ರಾಷ್ಟ್ರೀಯ ಅಂಗಾಗ ದಾನ ದಿನಾಚಣೆಯ ಅಂಗವಾಗಿ ಭಾನುವಾರದಂದು ಐ.ಎಮ್.ಎ ಉಡುಪಿ ಕರಾವಳಿ ಮತ್ತು ಲಯನ್ಸ್ ಕ್ಲಬ್ ಬ್ರಹ್ಮಾವರ ಜಂಟಿ ಸಹಯೋಗದಲ್ಲಿ ಜನಸಾಮಾನ್ಯರಿಗೆ ಮಧುಮೇಹ ಮತ್ತು ಅಂಗಾಗದಾನದ ಬಗ್ಗೆ ಮಾಹಿತಿ ಮತ್ತು ತಪಾಸಣಾ ಶಿಬಿರವನ್ನು ಐ.ಎಮ್.ಎ ಭವನ ಉಡುಪಿಯಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಹಿರಿಯ ವೈದ್ಯ ಡಾ.ಅಶೋಕ್ ಕುಮಾರ್ ವೈಜಿ ಇವರು ಉಧ್ಘಾಟಿಸಿ ಮಧುಮೇಹದ ಶೀಘ್ರ ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆಯ ಮಹತ್ವವನ್ನು ವಿವರಿಸಿದರು. ಬ್ರಹ್ಮಗಿರಿ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಲಯನ್ ಉಮೇಶ್ ನಾಯಕ್, […]
ಬ್ರಹ್ಮಗಿರಿ ವೃತ್ತಕ್ಕೆ ಸಾವರ್ಕರ್ ವೃತ್ತ ಎಂದು ನಾಮಕರಣ: ನಗರಸಭೆಗೆ ಮರು ಅರ್ಜಿ ಸಲ್ಲಿಕೆಗೆ ನಿರ್ಧಾರ
ಉಡುಪಿ: ನಗರದ ಬ್ರಹ್ಮಗಿರಿ ವೃತ್ತಕ್ಕೆ ಸಾವರ್ಕರ್ ವೃತ್ತ ಎಂದು ನಾಮಕರಣ ಮಾಡುವ ಬಗ್ಗೆ ಯಶ್ ಪಾಲ್ ಸುವರ್ಣ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ನಗರಸಭೆಗೆ ಮನವಿ ಮಾಡಲಾಗಿದೆ. ನಗರಸಭೆಯಿಂದ ಈ ವೃತ್ತಕ್ಕೆ ಆಸ್ಕರ್ ಫೆರ್ನಾಂಡೀಸ್ ವೃತ್ತವೆಂದು ನಾಮಕರಣ ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಕೆಯಾಗಿರುವ ಮಾಹಿತಿ ದೊರೆತಿದೆ. ಆದರೆ ಈ ಹಿಂದೆ ತೀರ್ಮಾನವಾದಂತೆ ಈ ವೃತ್ತಕ್ಕೆ ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಹೆಸರು ಇಡಬೇಕು. ಯಾವುದೇ ತೀರ್ಮಾನ ತೆಗೆದುಕೊಂಡಾಗ ತಕ್ಷಣಕ್ಕೆ ವಾಪಸ್ ಪಡೆಯುವುದು ಸಾಧ್ಯವಿಲ್ಲ, ಆದರೂ ಕ್ಷೇತ್ರದ ಶಾಸಕರು ಮತ್ತು […]