ಬ್ರಹ್ಮಾವರ: ಔಷಧಿಯೆಂದು ಇಲಿ ಪಾಷಣ ಸೇವಿಸಿ ಮಹಿಳೆ ಮೃತ್ಯು

ಬ್ರಹ್ಮಾವರ: ಔಷಧಿಯೆಂದು ಸಿರಾಫ್ ಬಾಟಲಿಯಲ್ಲಿದ್ದ ಇಲಿ ಪಾಷಣ ಸೇವಿಸಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ಪೆಜಮಂಗೂರು ಗ್ರಾಮದ ಗುಂಡಾಲು ಎಂಬಲ್ಲಿ ನಡೆದಿದೆ. ಮೃತರನ್ನು ಪೆಜಮಂಗೂರು ಗ್ರಾಮದ ಗುಂಡಾಲು ನಿವಾಸಿ 47ವರ್ಷದ ದೇವಕಿ ಎಂದು ಗುರುತಿಸಲಾಗಿದೆ. ಇವರಿಗೆ ಮಾ.3 ರಂದು ಕೆಮ್ಮು ಶುರುವಾಗಿತ್ತು. ಹೀಗಾಗಿ ಸಿರಾಫ್ ಔಷಧಿಯೆಂದು ಸಿರಾಫ್ ಬಾಟಲಿಯಲ್ಲಿ ಹಾಕಿದ್ದ ಇಲಿ ಪಾಷಣವನ್ನು ಆಕಸ್ಮಿಕವಾಗಿ ಕುಡಿದಿದ್ದಾರೆ. ಇದರಿಂದ ಅಸ್ವಸ್ಥಗೊಂಡಿದ್ದ ದೇವಕಿಯನ್ನು ಬ್ರಹ್ಮಾವರದ ಮಹೇಶ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿದ್ದು, […]