ಬ್ರಹ್ಮಾವರದ ಸ್ಪೋರ್ಟ್ಸ್ ಕ್ಲಬ್ ಈಜುಗಾರ ಆತ್ಮಹತ್ಯೆ
ಉಡುಪಿ: ಬ್ರಹ್ಮಾವರದ ಸ್ಪೋರ್ಟ್ಸ್ ಕ್ಲಬ್ ಈಜುಗಾರ ಹಾಗು ತರಬೇತುದಾರನಾಗಿದ್ದ ಮಂಜುನಾಥ ಮಜಳ್ಕರ್ ತಮ್ಮ ಸ್ಪೋರ್ಟ್ಸ್ ಕ್ಲಬ್ ನ ಗ್ರೀನ್ ರೂಮಿನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರವಾರ ಮೂಲದ ಮಂಜುನಾಥ ಮಜಳ್ಕರ್‌ರವರು ಕಳೆದ 4 ತಿಂಗಳಿನಿಂದ ಬ್ರಹ್ಮಾವರ ಸ್ಪೋಟ್ಸ್ ಕ್ಲಬ್‌ನ್ನಲ್ಲಿ ಈಜುಗಾರ ತರಬೇತಿಗಾರರಾಗಿದ್ದರು ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಸ್ಪೋಟ್ಸ್ ಕ್ಲಬ್ ನ ಗ್ರೀನ್ ರೂಮ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.