ಬ್ರಹ್ಮಾವರ: ರೋಟರ್ಯಾಕ್ಟ್ ಪದಾಧಿಕಾರಿಗಳ ತರಬೇತಿ ‘ಹೊಂಗನಸು’ – 2024
ಬ್ರಹ್ಮಾವರ: ರೋಟರಿ ಜಿಲ್ಲೆ 3182 ಇದರ ರೋಟರಾಕ್ಟ್ ಕ್ಲಬ್‌ಗಳ ಪದಾಧಿಕಾರಿಗಳ ತರಬೇತಿ ಕಮ್ಮಟ ‘ಹೊಂಗನಸು-2024’ ರೋಟರಿ ಕ್ಲಬ್ ಬ್ರಹ್ಮಾವರ ಹಾಗೂ ರೋಟರಾಕ್ಟ್ ಕ್ಲಬ್ ಬ್ರಹ್ಮಾವರ ಆತಿಥ್ಯದಲ್ಲಿ ಬ್ರಹ್ಮಾವರದ ರೋಟರಿ ಸಮಾಜ ಮಂದಿರದಲ್ಲಿ ಜರುಗಿತು. ಕಾರ್ಯಕ್ರಮವನ್ನು ರೋಟರಿ ಗವರ್ನರ್ ಸಿ.ಎ. ದೇವಾನಂದ್ ಉದ್ಘಾಟಿಸಿ ಮಾತನಾಡಿರೋಟರಾಕ್ಟ್ ಸದಸ್ಯರು ಭವಿಷ್ಯದ ನಾಯಕರು ಅವರು ತರಬೇತಿ ಮೂಲಕ ಕೌಶಲ ಹೆಚ್ಚಿಸಿಕೊಳ್ಳಬೇಕು ಎಂದರು. ಮುಖ್ಯ ಅತಿಥಿ ನಿಯೋಜಿತ ಗವರ್ನರ್ ಬಿ. ಎಂ. ಭಟ್ ಮಾತನಾಡಿ ಹೊಸ ರೋಟರಾಕ್ಟ್ ಕ್ಲಬ್‌ಗಳನ್ನು ಪ್ರಾಯೋಜಿಸುವಂತೆ ರೋಟರಿ ಕ್ಲಬ್‌ಗಳು ಕಾರ್ಯಪ್ರವೃತ್ತರಾಗಬೇಕು […]