ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಟ್ಟಡ ಉದ್ಘಾಟನೆ

ಉಡುಪಿ: ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ನಡೆಯಲಿದೆ. ಸಾವಿರ ವರ್ಷಗಳ ಇತಿಹಾಸ ಇರುವ ದೇಗುಲ ಮುಂದಿನ ಎರಡು ವರ್ಷಗಳಲ್ಲಿ ಸಂಪೂರ್ಣ ಜೀರ್ಣೋದ್ಧಾರ ಆಗಲಿದೆ. ಕ್ಷೇತ್ರಕ್ಕೆ ಈಗಾಗಲೇ 60 ಅಡಿ ಎತ್ತರದ ಧ್ವಜಸ್ತಂಭ ಮರ ಆಗಮಿಸಿದ್ದು ಇದೀಗ, ಜೀರ್ಣೋದ್ಧಾರ ಸಮಿತಿಯ ಕಟ್ಟಡದ ಉದ್ಘಾಟನೆ ನಡೆದಿದೆ. ಶಾಸಕ ಯಶ್ ಪಾಲ್ ಸುವರ್ಣ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿದ್ದಾರೆ. ಅಂದಾಜು 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ದೇಗುಲದ ನೀಲನಕಾಶೆಯನ್ನು ತ್ರೀಡಿ ವೀಡಿಯೋದಲ್ಲಿ ಬಿಡುಗಡೆಗೊಳಿಸಲಾಯ್ತು. ಜೀರ್ಣೋದ್ಧಾರದ ಕೆಲಸ […]