ಬ್ರಾಹ್ಮಣರು ಜ್ಞಾನ ಸಂಪಾದನೆಯ ಜತೆಗೆ ದೈಹಿಕ ಚೈತನ್ಯವನ್ನು ಪಡೆಯಬೇಕು :ಡಾ. ಪಿ.ಎಸ್. ಯಡಪಡಿತ್ತಾಯ
ಉಡುಪಿ: ಬ್ರಾಹ್ಮಣರು ಜ್ಞಾನ ಸಂಪಾದನೆಯ ಜತೆಗೆ ದೈಹಿಕ ಚೈತನ್ಯವನ್ನು ಪಡೆಯಬೇಕು. ಕ್ಷತ್ರೀಯ, ವೈಶ್ಯ,ಶೂದ್ರರನ್ನೂ ಪ್ರೀತಿ, ವಿಶ್ವಾಸದಿಂದ ಜತೆಯಾಗಿ ಕೊಂಡೊಯ್ಯುವ ಸಾಮರ್ಥ್ಯವನ್ನು ರೂಢಿಸಿಕೊಳ್ಳಬೇಕು. ಸಮಾಜ ತಿದ್ದುವ ಕೆಲಸ ಬ್ರಾಹ್ಮಣರು ಮಾಡಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಸ್. ಯಡಪಡಿತ್ತಾಯ ಹೇಳಿದರು. ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಅಂಗವಾಗಿ ರಾಜಾಂಗಣದಲ್ಲಿ ಶನಿವಾರ ನಡೆದ ಶೈಕ್ಷಣಿಕ ಸಮಾವೇಶದಲ್ಲಿ ಅವರು ಮಾತನಾಡಿದರು. ಬ್ರಾಹ್ಮಣರು ಸಮಾಜದ ಎಲ್ಲರನ್ನು ಅರ್ಥೈಸಿಕೊಳ್ಳುವ ಮೂಲಕ ಗೌರವ ಸಂಪಾದನೆ ಮಾಡಬೇಕು. ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ […]