ವಿವೇಕಾನಂದ ರಸ್ತೆ, ವ್ಯಾಘ್ರ ಚಾಮುಂಡಿ ಕ್ಷೇತ್ರದ ಮೇಲ್ಛಾವಣಿ ಲೋಕಾರ್ಪಣೆ
ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ 2.50 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಂಡ ಕಿನ್ನಿಮುಲ್ಕಿ ಸ್ವಾಗತ ಗೋಪುರದಿಂದ ಬ್ರಹ್ಮಗಿರಿ ಜಂಕ್ಷನ್ ರಸ್ತೆ, ವಿವೇಕಾನಂದ ರಸ್ತೆ ಹಾಗೂ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಶ್ರೀ ವ್ಯಾಘ್ರ ಚಾಮುಂಡಿ ಗಡುವಾಡು ಕ್ಷೇತ್ರದ ಮೇಲ್ಛಾವಣಿಯ ಉದ್ಘಾಟನೆಯನ್ನು ಶಾಸಕ ಯಶ್ ಪಾಲ್ ಸುವರ್ಣ ನೆರವೇರಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ರಶ್ಮಿ ಸಿ. ಭಟ್, ಅಮೃತ ಕೃಷ್ಣಮೂರ್ತಿ ಆಚಾರ್ಯ, ಪಕ್ಷದ ಮುಖಂಡರಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಭಗವಾನ್ ದಾಸ್, ದೇವದಾಸ್ ಶೆಟ್ಟಿಗಾರ್, ಆನಂದ ಕಾರ್ನಾಡ್, […]
ಬನ್ನಂಜೆ: ಏಪ್ರಿಲ್ 30 ರಿಂದ ಜಿಲ್ಲಾ ಬಾಲಭವನದಲ್ಲಿ ಬೇಸಿಗೆ ಶಿಬಿರ
ಬನ್ನಂಜೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಬೇಸಿಗೆ ಶಿಬಿರವು ನಗರದ ಬ್ರಹ್ಮಗಿರಿ ಜಿಲ್ಲಾ ಬಾಲಭವನದಲ್ಲಿ ಏಪ್ರಿಲ್ 30 ರಿಂದ 15 ದಿನಗಳ ಕಾಲ ನಡೆಯಲಿದ್ದು, ಆಸಕ್ತ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 3.30 ರ ವರೆಗೆ ಶಿಬಿರವು ನಡೆಯಲಿದ್ದು, ಶಿಬಿರದಲ್ಲಿ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಾದ ಚಿತ್ರಕಲೆ, ವಾಲ್ ಆರ್ಟ್, ಕರಕುಶಲ ಕಲೆ, ಪಿ.ಒ.ಪಿ ಹೂದಾನಿ, ಸಮೂಹ ನೃತ್ಯ, ಸಂಗೀತ, ಕರಾಟೆ, ಭಾಷಣ, ಕೌಶಲ್ಯ ತರಬೇತಿ ಹಾಗೂ […]
ಲಯನ್ ಹರಿಪ್ರಸಾದ್ ರೈ “ಲಯನ್ ಆಫ್ ದ ಇಯರ್”
ಉಡುಪಿ: ಫೆ 25 ರಂದು ಬ್ರಹ್ಮಗಿರಿ ಲಯನ್ಸ್ ಕ್ಲಬ್ ಗೆ ಪ್ರಾಂತ್ಯಾಧ್ಯಕ್ಷರ ಭೇಟಿ ಕಾರ್ಯಕ್ರಮವು ಉದ್ಯಾವರ ಬಲಾಯಿಪಾದೆ ನಿತ್ಯಾನಂದ ಆರ್ಕೆಡ್ ನಲ್ಲಿ ನಡೆಯಿತು. ಮಾಜಿ ಜಿಲ್ಲಾ ಗವರ್ನರ್ ಗಳ ಮಾಸಿಕದಂದು ಆರು ಮಂದಿ ಮಾಜಿ ಜಿಲ್ಲಾ ಗವರ್ನರ್ ಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರಾಂತೀಯ ಅಧ್ಯಕ್ಷ ಲಯನ್ ಹರಿಪ್ರಸಾದ್ ರೈ ಅವರನ್ನು “ಲಯನ್ ಆಫ್ ದ ಇಯರ್” ಎಂದು ಕ್ಲಬ್ಬಿನ ಅಧ್ಯಕ್ಷ ಲಯನ್. ಉಮೇಶ್ ನಾಯಕ್ ಘೋಷಿಸಿ, ಪ್ರಾಂತೀಯ ಅಧ್ಯಕ್ಷರ ಜೊತೆಯಲ್ಲಿ ಪ್ರಾಂತೀಯ ಪ್ರಥಮ ಮಹಿಳೆ ಲಯನ್ […]