ಅಪರೂಪದ ಬಾಂಬೆ ನೆಗೆಟಿವ್ ರಕ್ತದ ಗುಂಪಿನ ಗರ್ಭಿಣಿಯ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಕೆ.ಎಂ.ಸಿ

ಮಣಿಪಾಲ: ರಕ್ತದ ಗುಂಪು O ನೆಗೆಟಿವ್ ಆಗಿದ್ದು ಹಾಗೂ ಆಂಟಿಬಾಡಿ ಇದೆಯೆಂದು ಮುಂದಿನ ನಿರ್ವಹಣೆಗಾಗಿ ಗರ್ಭಿಣಿ ಮಹಿಳೆಯನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಕಳುಹಿಸಲಾಗಿದ್ದು ಇಲ್ಲಿನ ರಕ್ತ ಕೇಂದ್ರದಲ್ಲಿ ಪರೀಕ್ಷೆ ಮಾಡಿದಾಗ ಮಹಿಳೆಗೆ ಅತ್ಯಂತ ಅಪರೂಪದ ಬಾಂಬೆ ನೆಗೆಟಿವ್ ರಕ್ತದ ಗುಂಪು ಇರುವುದು ಕಂಡುಬಂದಿತು. ಇಂತಹ ಸಂದರ್ಭದಲ್ಲಿ ಆಂಟಿ ‘ಡಿ’ ಆಂಟಿಬಾಡಿ ಇರುವಿಕೆಯನ್ನುಪರೀಕ್ಷೆ ಮಾಡಲು ತುಂಬಾ ಕಷ್ಟ. ರಕ್ತದ ಉನ್ನತ ಮಟ್ಟದ ಇಮ್ಮುನೊಹೆಮಟಾಲೋಜಿ ಪರೀಕ್ಷೆಯ ಮೂಲಕ ಆಂಟಿ ‘ಡಿ’ ಆಂಟಿಬಾಡಿ ಇಲ್ಲವೆಂದು ಸಾಬೀತುಪಡಿಸಲಾಯಿತು. ಕಸ್ತೂರ್ಬಾ ಆಸ್ಪತ್ರೆಯ ರಕ್ತ ಕೇಂದ್ರದ […]