ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ: ಭದ್ರತೆ ಹೆಚ್ಚಳ

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಕರೆ ಮಾಡಿರುವುದು ಬೆಳಕಿಗೆ ಬಂದಿರುವ ಬೆನ್ನಲ್ಲೇ ಅವರಿಗೆ ನೀಡಿದ್ದ ಭದ್ರತೆಯನ್ನು ಹೆಚ್ಚಿಸಲಾಗಿದೆ. ಬೆದರಿಕೆ ಕರೆ ಮಾಡಿದವನು ತನ್ನನ್ನು ರಾಜಸ್ಥಾನದ ಜೋಧಪುರದ ರೋಕಿ ಭಾಯ್ ಎಂದು ಪರಿಚಯಿಸಿಕೊಂಡಿದ್ದು, ಏಪ್ರಿಲ್ 30 ರಂದು ನಟನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಕಂಟ್ರೋಲ್ ರೂಂಗೆ ಬಂದ ಕರೆಯಲ್ಲಿ, ರಾಜಸ್ಥಾನದ ಜೋಧಪುರದ ರೋಕಿ ಭಾಯ್ ಎಂದು ಗುರುತಿಸಿಕೊಂಡ ವ್ಯಕ್ತಿ ಏಪ್ರಿಲ್ 30 ರಂದು ನಟ ಸಲ್ಮಾನ್ ಖಾನ್ […]

ಮಂಗಳೂರು: ಚಿತ್ರ ನಟಿ ಪೂಜಾ ಹೆಗ್ಡೆ ಅಣ್ಣನ ಮದುವೆಯಲ್ಲಿ ಸಲ್ಮಾನ್ ಖಾನ್ ಭಾಗಿ

ಮಂಗಳೂರು: ಮಂಗಳೂರಿನಲ್ಲಿ ನಡೆದ ಪೂಜಾ ಹೆಗ್ಡೆ ಸಹೋದರನ ಮದುವೆಯಲ್ಲಿ ಚಿತ್ರನಟ ಸಲ್ಮಾನ್ ಭಾಗವಹಿಸಿರುವ ಚಿತ್ರಗಳು ಕಂಡುಬಂದಿವೆ. ಮುಂಬರುವ ಚಿತ್ರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ನಲ್ಲಿ ಪೂಜಾ ಹೆಗ್ಡೆ ಸಲ್ಮಾನ್ ಎದುರು ಜೋಡಿಯಾಗಿದ್ದಾರೆ. ಪೂಜಾ ಹೆಗ್ಡೆ ಅವರ ಸಹೋದರ ರಿಷಬ್ ಹೆಗ್ಡೆ ಜನವರಿ 30 ರಂದು ಶಿವಾನಿ ಶೆಟ್ಟಿ ಅವರನ್ನು ವಿವಾಹವಾಗಿದ್ದಾರೆ.ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವೈರಲ್ ಚಿತ್ರವೊಂದರಲ್ಲಿ, ಪೂಜಾ ಮತ್ತು ಸಲ್ಮಾನ್ ಖಾನ್ ನವವಿವಾಹಿತರೊಂದಿಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಪೂಜಾ ಹೆಗ್ಡೆ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ […]

ಹಸೆಮಣೆ ಏರಲಿದೆ ಕೆ.ಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಜೋಡಿ: ಖಂಡಾಲಾದಲ್ಲಿ ವಿವಾಹ ಸಾಧ್ಯತೆ

ಬಹುಚರ್ಚಿತ ಜೋಡಿ ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಕೆ.ಎಲ್ ರಾಹುಲ್ ಮತ್ತು ನಟ ಸುನಿಲ್ ಶೆಟ್ಟಿ ಅವರ ಮಗಳು ಅಥಿಯಾ ಶೆಟ್ಟಿ ಕಡೆಗೂ ಹಸೆಮಣೆ ಏರಲು ತಯಾರಾಗಿದ್ದಾರೆ. ಜನವರಿ 21 ರಂದು ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ ಅವರ ವಿವಾಹ ಮಹೋತ್ಸವಗಳು ಪ್ರಾರಂಭವಾಗಲಿದ್ದು, ಜನವರಿ 23 ರಂದು ಈ ಜೋಡಿ ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ. ಅಥಿಯಾ ತಂದೆ ಚಿತ್ರನಟ ಸುನೀಲ್ ಶೆಟ್ಟಿ ಅವರು 17 ವರ್ಷಗಳ ಹಿಂದೆ ಮಹಾರಾಷ್ಟ್ರದ ಖಂಡಾಲಾದಲ್ಲಿ ನಿರ್ಮಿಸಿರುವ […]

ಬಾಲಿವುಡ್ ಬೇಡ ಕನ್ನಡ ಮಾತ್ರ ಸಾಕು; ಕನ್ನಡ ನನ್ನ ಕರ್ಮಭೂಮಿ: ರಿಷಭ್ ಶೆಟ್ಟಿ

ಟೈಮ್ಸ್ ನೌ ಶೃಂಗಸಭೆ 2022 ರಲ್ಲಿ ಹಿಂದಿ ಚಿತ್ರ ನಟ ಅನುಪಮ್ ಖೇರ್, ಕನ್ನಡ ನಟ ರಿಷಭ್ ಶೆಟ್ಟಿ ನಡುವೆ ಲೇಖಕ ಚೇತನ್ ಭಗತ್ ಸಂವಾದವೇರ್ಪಡಿಸಿದ್ದಾರೆ. ಟೈಮ್ಸ್ ನೌ ಶೃಂಗಸಭೆಯ ಹಿಂದಿನ ಆವೃತ್ತಿಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ರವಿಶಂಕರ್ ಪ್ರಸಾದ್, ಪಿಯೂಷ್ ಗೋಯಲ್, ನಿತಿನ್ ಗಡ್ಕರಿ, ಸ್ಮೃತಿ ಇರಾನಿ, ಪೀಟರ್ ಝೈಹಾನ್, ಕೆ ಶಿವನ್ ಮತ್ತು ಶ್ರೀ ರವಿಶಂಕರ್ ಮುಂತಾದವರು ಭಾಗವಹಿಸಿದ್ದಾರೆ. ಈ ಬರಿ ಹಿಂದಿ ಚಿತ್ರನಟ […]

ಸೌತ್ ವುಡ್ ಸಿನಿಮಾಗಳ ಅಬ್ಬರಕ್ಕೆ ಬೆಚ್ಚಿದ ಬಾಲಿವುಡ್! ಬಾಯ್ ಕಾಟ್ ಬಾಲಿವುಡ್ ಟ್ರೆಂಡ್ ಗಳಿಂದ ಘಟಾನುಘಟಿ ನಟರ ಚಿತ್ರ ಮೂಲೆಗುಂಪು; ಕೋಟ್ಯಂತರ ರೂ ನಷ್ಟ!

ಮುಂಬೈ: ಅದೊಂದು ಕಾಲವಿತ್ತು, ಸಿನಿಮಾ ರಂಗ ಎಂದರೆ ಹಿಂದಿ ಭಾಷೆಗಳ ಚಿತ್ರ ನಿರ್ಮಾಣ ಮಾಡುವ ಬಾಲಿವುಡ್ ಮಾತ್ರ ಎನ್ನಲಾಗುತ್ತಿತ್ತು. ಬಾಲಿವುಡ್ ಎಂದರೆ ಬಾಯಿ ಬಾಯಿ ಬಿಡುತ್ತಿದ್ದ ಕಾಲವದು. ಬಾಲಿವುಡ್ಡಿನ ಏಕಚಕ್ರಾಧಿಪತ್ಯದಡಿ ಭಾರತೀಯ ಸಿನಿರಂಗದ ಅದೆಷ್ಟೋ ಭಾಷೆಗಳ ಉತ್ತಮ ಚಿತ್ರಗಳೂ ಮಸುಕಾಗಿರುತ್ತಿದ್ದವು. ಆದರೆ ಈಗ ಎಲ್ಲವೂ ತಲೆಕೆಳಗು. ಟಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್, ಒಟ್ಟಾರೆಯಾಗಿ ಹೇಳುವುದಾದರೆ ಅಖಂಡ ದಕ್ಷಿಣ ಭಾರತದ ‘ಸೌತ್ ವುಡ್’ ಸಿನಿಮಾಗಳ ಅಬ್ಬರಕ್ಕೆ ಭಾರತೀಯ ಸಿನಿಮಾರಂಗದ ‘ಬಾದಶಹಾ’ ಎಂದು ಮೆರೆಯುತ್ತಿದ್ದ ಬಾಲಿವುಡ್ ಬೆಚ್ಚಿಬಿದ್ದಿದೆ. ಒಂದೆಡೆ ಪ್ರಖರ […]