ಧಾರಾಕಾರ ಮಳೆ: ಬೊಳ್ಜೆ, ಉದ್ಯಾವರ ಪರಿಸರದಲ್ಲಿ ನೆರೆ ಭೀತಿ

ಉಡುಪಿ: ಉಡುಪಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಗದ್ದೆ, ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಪಾಪನಾಶಿನಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿಪಾತ್ರದ ಪ್ರದೇಶಗಳಲ್ಲಿ ನೆರೆ ಭೀತಿ ಉಂಟಾಗಿದೆ.ವರುಣನ ಆರ್ಭಟಕ್ಕೆ ಉದ್ಯಾವರ ಬೊಳ್ಜೆ ಪರಿಸರದಲ್ಲಿ ನೆರೆ ಬಂದಿದ್ದು, ಮನೆಗಳಿಗೆ ನೀರು ನುಗ್ಗುವ ಆತಂಕ ಸೃಷ್ಟಿಯಾಗಿದೆ. ಇದೇ ರೀತಿ ಮಳೆ ಮುಂದುವರಿದಲ್ಲಿ ಬೊಳ್ಜೆ ಪರಿಸರ ಸಂಪೂರ್ಣ ಮುಳುಗಡೆ ಆಗುವ ಸಂಭವಿದೆ. ಅಪಾಯದಲ್ಲಿರುವ ಮನೆಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲು ಜಿಲ್ಲಾಡಳಿತ ಸಜ್ಜಾಗಿದೆ‌. ಉದ್ಯಾವರ, ಪಿತ್ರೋಡಿ, ಕಡೆಕಾರು ಭಾಗಗಳಲ್ಲಿಯೂ ನೆರೆ ಭೀತಿ […]