ಪಡುಬಿದ್ರೆ: ಬ್ಲ್ಯೂ ಫ್ಲ್ಯಾಗ್ ಬೀಚ್‍ನಲ್ಲಿ ತೀವ್ರ ಕಡಲ್ಕೊರೆತ; ಸಮುದ್ರ ಪಾಲಾದ ರಕ್ಷಣಾ ಗೋಡೆ

ಪಡುಬಿದ್ರೆ: ಪಡುಬಿದ್ರೆ ಎಂಡ್ ಪಾಯಿಂಟ್ ನಲ್ಲಿರುವ ಅಂತರಾಷ್ಟ್ರೀಯ ಮಾನ್ಯತೆ ಪಡೆದ ಬ್ಲೂ ಫ್ಲ್ಯಾಗ್ ಬೀಚ್‍ನಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿದೆ. ಕಳೆದ ಎರಡು ದಿನಗಳಿಂದ ಸಮುದ್ರ ಪ್ರಕ್ಷುಬ್ದಗೊಂಡಿದ್ದು, ಭಾರಿ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಬೀಚ್ ಅಭಿವೃದ್ಧಿಗಾಗಿ ನಿರ್ಮಿಸಿದ ಕಾಂಕ್ರೀಟ್ ತಡೆಗೋಡೆ, ವಾಚಿಂಗ್ ಟವರ್ ಪಕ್ಕದಲ್ಲಿ ಭಾರೀ ಗಾತ್ರದ ಅಲೆಗಳು ಅಪ್ಪಳಿಸುತ್ತಿವೆ. ಪ್ರವಾಸಿಗರ ಅನುಕೂಲತೆಗಾಗಿ ಅಳವಡಿಸಿದ ಗುಡಿಸಲು, ಗಿಡ ಮರಗಳು, ಲೈಟ್ ಕಂಬಗಳು, ಪೈಪ್‍ಲೈನ್ ಎಲ್ಲವೂ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ. ರಕ್ಷಣೆಗಾಗಿ ಕಟ್ಟಿದ ಕಲ್ಲಿನ ಕಟ್ಟೆ ಕೊಚ್ಚಿಕೊಂಡು […]