ಪಂಡಿತ್ ದೀನ್ ದಯಾಳ್ ಸೈದ್ದಾಂತಿಕ ನಿಲುವಿನಲ್ಲಿ ಬದ್ದತೆ ಹೊಂದಿದ್ದರು: ಕಾಮತ್
ಉಡುಪಿ: ಸರಳ, ಸಜ್ಜನಿಕೆಯ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದ ಪಂಡಿತ್ ದೀನ್‌ದಯಾಳ್ ಅವರು, ಸೈದ್ಧಾಂತಿಕ ನಿಲುವಿನಲ್ಲಿ ಬದ್ಧತೆಯನ್ನು ಹೊಂದಿದ್ದರು. ಆದ್ದರಿಂದ ಅವರ ಹೆಸರು ಭಾರತದ ರಾಜಕೀಯದಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಘೋಷ್ ಕಾರ್ಯಕರ್ತ ರಾಘವೇಂದ್ರ ಕಾಮತ್ ಹೇಳಿದರು. ಪಂಡಿತ್ ದೀನ್‌ದಯಾಳ್ ಬಲಿದಾನ ದಿನದ ಅಂಗವಾಗಿ ಕಡಿಯಾಳಿಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಮರ್ಪಣ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನಸಂಘವನ್ನು ರಾಜಕೀಯವಾಗಿ ಬೆಳೆಸುವುದರ ಜತೆಗೆ ಅದನ್ನು ಮುಂಚೂಣಿಗೆ ತರುವಲ್ಲಿ ದೀನ್‌ದಯಾಳ್ ಅವರ ಪಾತ್ರ ದೊಡ್ಡದಿದೆ. ಜನಸಂಘದಲ್ಲಿ ಹಲವಾರು […]