ಚುನಾವಣಾ ಬೂತ್ ಗಳಲ್ಲಿ ವೀಡಿಯೊ ರೆಕಾರ್ಡಿಂಗ್ ಶೇ 100 ಕ್ಕೆ ಹೆಚ್ಚಿಸಲು ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯ (Loksabha Election) ವೇಳೆ ಎಲ್ಲಾ ಮತಗಟ್ಟೆಗಳಲ್ಲಿ ನಡೆಯುವ ಮತದಾನ ಪ್ರಕ್ರಿಯೆಯನ್ನು ವಿಡಿಯೋಗ್ರಾಫ್ ಮಾಡುವಂತೆ ಬಿಜೆಪಿಯು ಚುನಾವಣಾ ಆಯೋಗವನ್ನು(ECI) ಒತ್ತಾಯಿಸಿದೆ. ಬುಧವಾರದಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ನೇತೃತ್ವದ ಪಕ್ಷದ ನಿಯೋಗವು ಈ ವಿಚಾರವಾಗಿ ನವದೆಹಲಿಯಲ್ಲಿ ಆಯೋಗವನ್ನು ಭೇಟಿ ಮಾಡಿದೆ. ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ವೈಷ್ಣವ್, ಮುಂಬರುವ ಚುನಾವಣೆಯಲ್ಲಿ ಬೂತ್‌ಗಳಲ್ಲಿ ಮಾಡುವ ವೀಡಿಯೊ ರೆಕಾರ್ಡಿಂಗ್ ಪ್ರಮಾಣವನ್ನು ಶೇಕಡಾ 50 ರಿಂದ 100 ಕ್ಕೆ ಹೆಚ್ಚಿಸಬೇಕು ಎಂದು ಚುನಾವಣಾ ಸಂಸ್ಥೆಯನ್ನು ಒತ್ತಾಯಿಸಿದ್ದೇವೆ. ಮತಗಟ್ಟೆಗಳಲ್ಲಿ […]
ಆನೆಯಿಂದ ಕೊಲ್ಲಲ್ಪಟ್ಟ ಕೇರಳದ ವ್ಯಕ್ತಿಗೆ ರಾಜ್ಯದಿಂದ 15 ಲಕ್ಷ ರೂ ಪರಿಹಾರ: ಬಿಜೆಪಿ ಕಿಡಿ
ಬೆಂಗಳೂರು: ರಾಜ್ಯದಲ್ಲಿ ಸೆರೆಹಿಡಿಯಲಾದ ಆನೆಯಿಂದ ಕೊಲ್ಲಲ್ಪಟ್ಟ ಕೇರಳದ ವ್ಯಕ್ತಿಯ ಕುಟುಂಬಕ್ಕೆ ಕರ್ನಾಟಕ ಸರ್ಕಾರವು ಪರಿಹಾರ ಹಣದ ರೂಪವಾಗಿ 15 ಲಕ್ಷ ರೂಗಳನ್ನು ಕಾನೂನುಬಾಹಿರವಾಗಿ ಮಂಜೂರು ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಯನಾಡು ಸಂಸದರಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದ ತೆರಿಗೆದಾರರ ಹಣವನ್ನು ಕಾಂಗ್ರೆಸ್ ದುರುಪಯೋಗಪಡಿಸಿಕೊಳ್ಳುತ್ತಿದೆ. ಅಲ್ಲದೇ ಕರ್ನಾಟಕದಲ್ಲಿ ಸೆರೆಹಿಡಿಯಲಾದ ಆನೆಯ ತುಳಿತಕ್ಕೊಳಗಾಗಿ ಕೇರಳದ ಅಜೀಶ್ ಮೃತಪಟ್ಟಿದ್ದಾರೆ ಎಂದು ಸುಳ್ಳು ಹಬ್ಬಿಸಲಾಗಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಎಕ್ಸ್‌ನಲ್ಲಿ ಕಿಡಿಕಾರಿದ್ದಾರೆ. ‘ಬರಗಾಲದಿಂದ ರಾಜ್ಯದಾದ್ಯಂತ […]
ಮಾರ್ಚ್ 6 ರಂದು ಬಿಜೆಪಿ ಕಾರ್ಯಕರ್ತರ ಅಯೋಧ್ಯಾ ಪ್ರವಾಸ ಕಾರ್ಯಕ್ರಮ: ನೋಂದಣಿ ಆರಂಭ
ಉಡುಪಿ: ಪ್ರತಿ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ವತಿಯಿಂದ 80 ಕಾರ್ಯಕರ್ತರನ್ನು ಅಯೋಧ್ಯೆ ಶ್ರೀರಾಮಚಂದ್ರನ ದರ್ಶನ ಮಾಡಿಸುವ ಕಾರ್ಯಕ್ರಮವನ್ನು ರಾಜ್ಯ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಉಡುಪಿ ಹಾಗೂ ಮಂಗಳೂರು ಜಿಲ್ಲೆಯ ಕಾರ್ಯಕರ್ತರ ಅಯೋಧ್ಯಾ ದರ್ಶನ ಪ್ರವಾಸವು ಮಾರ್ಚ್ 6 ಬುಧವಾರ ಉಡುಪಿ ರೈಲು ನಿಲ್ದಾಣದಿಂದ ಆರಂಭಗೊಳ್ಳಲಿದೆ. ಈಗಾಗಲೇ ಹೆಸರನ್ನು ನೋಂದಣಿ ಮಾಡಿರುವ ಕಾರ್ಯಕರ್ತರು ತಮ್ಮ ಮೊಬೈಲ್ ನಂಬರ್ – ಆಧಾರ್ ಕಾರ್ಡ್ ಪ್ರತಿ ಹಾಗೂ 3000ರೂಗಳನ್ನು ತಮ್ಮ ಮಂಡಲದ ಅಯೋಧ್ಯಾ ದರ್ಶನ ಪ್ರಮುಖರಿಗೆ ಕೂಡಲೇ ತಲಪಿಸಬೇಕಾಗಿ […]
ಸಾಲ ಮಾಡಿ ತುಪ್ಪ ತಿನ್ನು ಎನ್ನುವ ಬಜೆಟ್ : ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್
ಉಡುಪಿ: ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಂಡಿಸಿದ 15ನೇ ಬಜೆಟ್ ಲೋಕಸಭಾ ಚುನಾವಣೆ ದೃಷ್ಟಿ ಇಟ್ಟುಕೊಂಡು ಎಲ್ಲರನ್ನೂ ತೃಪ್ತಿ ಪಡಿಸುತ್ತೇನೆ ಎಂಬ ಧ್ಯೇಯ ವಾಕ್ಯದೊಂದಿಗೆ ಸಾಲ ಮಾಡಿ ತುಪ್ಪ ತಿನ್ನು ಎಂಬಂತಿದೆ. 1 ಲಕ್ಷ 5 ಸಾವಿರ ಕೋಟಿ ಸಾಲ ಮಾಡಿ ಅದರಲ್ಲಿ 52 ಸಾವಿರ ಗ್ಯಾರಂಟಿಗಳಿಗೆ ಹಂಚಿ ಉಳಿದ ಮೊತ್ತವನ್ನು ಅವರ ಓಟು ಬ್ಯಾಂಕ್‌ಗಳಿಗೆ ಹಂಚಿ ತೃಪ್ತಿ ಪಡಿಸುವ ಪ್ರಯತ್ನ ಮಾಡಿದ್ದಾರೆ. ಶಾಸಕರುಗಳಿಗೆ ಯಾವುದೇ ಅನುದಾನ ಕೊಡದೆ, ಪೊಳ್ಳು ಬಜೆಟ್ ಮಂಡಿಸಿದ್ದಾರೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ರಾಜ್ಯದ […]
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಥಮ ಸಭೆ: ಗೆಲುವಿಗೆ ಪಣ ತೊಡಲು ಯಶ್ ಪಾಲ್ ಸುವರ್ಣ ಕರೆ
ಬೆಂಗಳೂರು: ಬಿಜೆಪಿ ಮಲ್ಲೇಶ್ವರಂ ಕಚೇರಿಯಲ್ಲಿ ನಡೆದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಪ್ರಥಮ ಸಭೆಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಉಡುಪಿ ಶಾಸಕ ಯಶಪಾಲ್ ಸುವರ್ಣ ಭಾಗವಹಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಾದ್ಯಂತ ಮೋರ್ಚಾದ ಮೂಲಕ ಪಕ್ಷವನ್ನು ಪರಿಣಾಮಕಾರಿಯಾಗಿ ಸಂಘಟಿಸಿ ಪಕ್ಷದ ಗೆಲುವಿಗೆ ಪಣ ತೊಡುವಂತೆ ಕರೆ ನೀಡಿದರು. ಸಭೆಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಧ್ಯಕ್ಷ ರಘು ಕೌಟಿಲ್ಯ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.