22ನೇ ಕಾಮನ್‌ವೆಲ್ತ್ ಗೇಮ್ಸ್ ಗೆ ವಿದಾಯ: 22 ಚಿನ್ನ ಸೇರಿದಂತೆ 61 ಪದಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿ ಭಾರತ
ಬರ್ಮಿಂಗ್‌ಹ್ಯಾಮ್: ಇಲ್ಲಿನ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಕಾಮನ್‌ವೆಲ್ತ್ ಗೇಮ್ಸ್ 2022 ಸೋಮವಾರ ರಾತ್ರಿ ಅದ್ದೂರಿ ಸಮಾರೋಪ ಸಮಾರಂಭದೊಂದಿಗೆ ಕೊನೆಗೊಂಡಿತು. 72 ರಾಷ್ಟ್ರಗಳು ಮತ್ತು ಪ್ರಾಂತ್ಯಗಳಿಂದ 5,000 ಕ್ಕೂ ಹೆಚ್ಚು ಕ್ರೀಡಾಪಟುಗಳು ಸ್ಪರ್ಧಿಸಿದ ಹನ್ನೊಂದು ದಿನಗಳ ಕ್ರೀಡಾ ಚಟುವಟಿಕೆಗಳ ನಂತರ ಆಟಗಳು ಅಧಿಕೃತವಾಗಿ ಮುಕ್ತಾಯಗೊಂಡವು. ಸಮಾರೋಪ ಸಮಾರಂಭದಲ್ಲಿ ಬಾಕ್ಸರ್ ನಿಖತ್ ಝರೀನ್ ಮತ್ತು ಟೇಬಲ್ ಟೆನಿಸ್ ಆಟಗಾರ ಅಚಂತಾ ಶರತ್ ಕಮಲ್ ಅವರು ರಾಷ್ಟ್ರಧ್ವಜದೊಂದಿಗೆ ಭಾರತ ತಂಡವನ್ನು ಮುನ್ನಡೆಸಿದರು. 2026 ರಲ್ಲಿ ಕ್ರೀಡಾಕೂಟದ ಮುಂದಿನ ಆವೃತ್ತಿಯನ್ನು ಆಯೋಜಿಸಲಿರುವ ಆಸ್ಟ್ರೇಲಿಯಾದ ವಿಕ್ಟೋರಿಯಾ […]
ಕಾಮನ್ ವೆಲ್ತ್ ಗೇಮ್ಸ್: ಸಾರ್ವಕಾಲಿಕ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಭಾರತೀಯ ತಂಡ; ಇದುವರೆಗೂ ಒಟ್ಟು 40 ಪದಕ ಗೆದ್ದ ಕ್ರೀಡಾಪಟುಗಳು
ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತವು ತನ್ನ ಸಾರ್ವಕಾಲಿಕ ಅತ್ಯುತ್ತಮ ಪ್ರದರ್ಶನವನ್ನು ತೋರಿಸುತ್ತಿದ್ದು, ಆಗಸ್ಟ್ 5 ರವರೆಗೆ ಚಿನ್ನ, ಬೆಳ್ಳಿ ಮತ್ತು ಕಂಚು ಸೇರಿದಂತೆ ಒಟ್ಟು 40 ಪದಕಗಳನ್ನು ಗಳಿಸಿದೆ. ಮೊನ್ನೆವರೆಗೆ ಭಾರ ಎತ್ತುವ ಸ್ಪರ್ಧೆಯಲ್ಲಿ ಪದಕಗಳ ಸುರಿಮಳೆಗೈದ ಭಾರತೀಯ ಪಟುಗಳು, ಈಗ ಕುಸ್ತಿಯಲ್ಲಿಯೂ ಚಿನ್ನದ ಬೇಟೆಯನ್ನು ನಿರಂತರವಾಗಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಕುಸ್ತಿಪಟುಗಳಾದ ರವಿಕುಮಾರ್ ದಹಿಯಾ, ವಿನೇಶ್ ಫೋಗಟ್ ಮತ್ತು ನವೀನ್ ಆಯಾ ವಿಭಾಗಗಳಲ್ಲಿ ಹ್ಯಾಟ್ರಿಕ್ ಚಿನ್ನದ ಪದಕಗಳೊಂದಿಗೆ ಸ್ಪರ್ಧೆಯಲ್ಲಿ ಪ್ರಾಬಲ್ಯ ಸಾಧಿಸಿದರು. […]