‘ಭಾರ’ ಎತ್ತುವ ಸ್ಪರ್ಧೆಯಲ್ಲಿ ದೇಶದ ಹಿರಿಮೆಯನ್ನು ಹೆಚ್ಚಿಸುತ್ತಿರುವ ಕ್ರೀಡಾಪಟುಗಳು:ಬಿಂದ್ಯಾರಾಣಿ ದೇವಿಗೆ ಬೆಳ್ಳಿ ಪದಕ; ಎರಡು ದಿನದಲ್ಲಿ ನಾಲ್ಕು ಪದಕ ಗೆದ್ದ ‘ಭಾರ’ತ
ಬರ್ಮಿಂಗ್ ಹ್ಯಾಂಮ್: ಇಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತದ ಗರಿಮೆಯನ್ನು ಸತತವಾಗಿ ಎತ್ತುತ್ತಿರುವ ಸ್ಪರ್ಧಿಗಳಲ್ಲಿ ಬಿಂದ್ಯಾರಾಣಿ ದೇವಿಯವರು ಕೂಡಾ ಸೇರಿದ್ದಾರೆ. ಕೇವಲ ಎರಡೇ ದಿನಗಳಲ್ಲಿ ಭಾರತವು ತನ್ನ ನಾಲ್ಕನೇ ಪದಕವನ್ನು ಬಗಲಿಗೆ ಹಾಕಿಕೊಂಡಿದೆ. ಭಾರತದ ವೈಟ್ ಲಿಫ್ಟರ್ ಬಿಂದಿಯಾರಾಣಿ ದೇವಿಯವರು ಕ್ಲೀನ್ ಮತ್ತು ಜರ್ಕ್‌ನಲ್ಲಿ 110 ಕೆಜಿ ಎತ್ತುವ ಮೂಲಕ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಪದಕ ಗೆದ್ದ ಆಟಗಾರ್ತಿಗೆ ದೇಶದೆಲ್ಲೆಡೆಯಿಂದ ಅಭಿನಂದನೆಗಳು ಹರಿದು ಬರುತ್ತಿವೆ.