ಹಾಸನ: ನೆಲಕ್ಕುರುಳಿದ ಮೋಟಾರ್ ಬೈಕ್; ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ

ಹಾಸನ: ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಗುರುವಾರದಂದು ಮೋಟರ್ ಬೈಕ್ ಹಿಂಬದಿ ಸವಾರಳಾಗಿದ್ದ 11 ವರ್ಷದ ಶಾಲಾ ಬಾಲಕಿಯೊಬ್ಬಳು ಮಳೆ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಗುರುವಾರ ಸಂಭವಿಸಿದೆ. ಐದನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಹೆಗ್ಗದಗೆರೆ ನಿವಾಸಿ ರಂಜಿತಾ ತನ್ನ ಸಂಬಂಧಿಯೊಬ್ಬರ ಬೈಕಿನಲ್ಲಿ ಹಿಂಬದಿ ಸವಾರಳಾಗಿ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಭಾರೀ ಮಳೆಯ ಕಾರಣದಿಂದ ಇಲ್ಲಿನ ದಡ್ಡಿಹಳ್ಳಿಯ ಕೆರೆಯ ನೀರು ಉಕ್ಕೇರಿ ಹರಿದ ಪರಿಣಾಮ ಬೈಕ್ ನೆಲಕ್ಕೆ ಉರುಳಿದೆ. ಇದನ್ನು ಕಂಡ ಗ್ರಾಮಸ್ಥರು ಬೈಕ್ ಚಾಲಕನನ್ನು ರಕ್ಷಿಸಿದ್ದಾರೆ ಆದರೆ ದುರಾದೃಷ್ಟವಶಾತ್ ಬಾಲಕಿ […]

ರಸ್ತೆ ಅಪಘಾತ: ಚಿಕಿತ್ಸೆ ಫಲಿಸದೆ ಸವಾರ ಮೃತ್ಯು

ಕಾರ್ಕಳ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ರೆಂಜಾಳದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ಕಾರ್ಕಳ ರೆಂಜಾಳ ನಿವಾಸಿ 63 ವರ್ಷದ ಅಜಿತ್ ಕುಮಾರ್ ಮೃತ ಬೈಕ್ ಸವಾರ. ಇವರು ಮೇ 2ರಂದು ರಾತ್ರಿ ಮನೆಗೆ ಹೋಗುತ್ತಿದ್ದ ವೇಳೆ ಕಸಬಾ ಗ್ರಾಮದ ಗ್ಯಾಸ್ ಗೋಡೌನ್ ಬಳಿ ನಾಯಿಯೊಂದು ಅಡ್ಡ ಬಂದ ಪರಿಣಾಮ ಒಮ್ಮೇಲೆ ಬ್ರೇಕ್ ಹಾಕಿದ್ದರು‌. ಇದರಿಂದ ಬೈಕ್ ಸಮೇತ ರಸ್ತೆಗೆ ಬಿದ್ದ ಅಜಿತ್ ಗಂಭೀರ ಗಾಯಗೊಂಡಿದ್ದರು. […]

ಬೈಕ್ ಅಪಘಾತ: ಸವಾರ ಸಾವು

ಉದ್ಯಾವರ ಹಾಲಿಮಾ ಸಾಬ್ಜು  ಹಾಲ್ ಎದುರು ಜ. 21ರಂದು ರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಗಂಗೊಳ್ಳಿ ಮೊವಾಡಿ ನಿವಾಸಿ ಶಿವರಾಜ್(39) ಎಂದು ಗುರುತಿಸಲಾಗಿದೆ. ಬೈಕ್ ಮಂಗಳೂರಿನಿಂದ ಉಡುಪಿ ಕಡೆ ಬರುತ್ತಿದ್ದ ವೇಳೆ ಅಪಘಾತಕ್ಕೀಡಾಗಿದ್ದು ಗಂಭೀರ ಗಾಯಗೊಂಡಿದ್ದ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದ ಎನ್ನಲಾಗಿದೆ ಸ್ಥಳಕ್ಕೆ ಕಾಪು ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.