ಈ ಪರಿಸರ ಸ್ನೇಹಿ ಬಿದಿರಿನ ಬುಟ್ಟಿ, ಸೇರು ಖರೀದಿಸಿ: ಬಡ ಕುಟುಂಬದ ಬದುಕಿನ ಬುಟ್ಟಿಗೆ ಖುಷಿ ತುಂಬಿಸಿ!
ಬಡತನದ ಬೇಗೆಯಿಂದ ಬಳಲುತ್ತಿರುವ ಕುಟುಂಬಗಳು ಕಾರ್ಕಳ ತಾಲೂಕಿನ ಕಡ್ತಲದ ಚೆನ್ನಿಬೆಟ್ಟು ಸಮೀಪ ನೂರಾರು ಬಿದಿರಿನ ಉತ್ಪನ್ನಗಳನ್ನು ಮಾಡಿ ಅದನ್ನೇ ನಂಬಿ ಕೂತಿದೆ. ಈ ಕುಟುಂಬ ಇದೀಗ ಸಾಂಪ್ರದಾಯಿಕ ಬೆತ್ತದ ಬುಟ್ಟಿ, ಸೇರು,ಅಕ್ಕಿ ತಡಪೆಗಳನ್ನು ತಯಾರಿಸಿಟ್ಟುಕೊಂಡು ಯಾರಾದರೂ ಕೊಳ್ಳುವರಾ ಅಂತ ಕಾಯುತ್ತಾ ಕೂತಿದ್ದಾರೆ. ಕೋಲ ಕಟ್ಟಳೆಗಳು ಹೀಗೆ ಸಾಂಪ್ರದಾಯಿಕ ಶೈಲಿಯ ತುಳುನಾಡಿನ ಕಲೆಯನ್ನು ಉಳಿಸಿಕೊಂಡು ಕಲಿಸಿಕೊಂಡು ಬರುವ ವಂಶ ಅವರದ್ದು. ಇವರ ಹೆಸರು ಸುಧಾಕರಣ್ಣ, ಕೋಲ ಮೊದಲಾದ ವೇಷಗಳನ್ನು ಹಾಕುತ್ತ ಕೋಲ ಕಟ್ಟುವಲ್ಲಿ ತುಳುನಾಡಿನಲ್ಲಿ ಹೆಸರನ್ನು ಪಡೆದ ವ್ಯಕ್ತಿ […]