ಭಾರತದ ಪ್ರಪ್ರಥಮ 5ಜಿ ತರಂಗಾಂತರ ಹರಾಜಿನ ಮೊದಲ ದಿನದಂದು 1.45 ಲಕ್ಷ ಕೋಟಿ ರೂ ದಾಖಲೆ ಬಿಡ್ಡಿಂಗ್ ಸ್ವೀಕರಿಸಿದ ಕೇಂದ್ರ ಸರ್ಕಾರ

ನವದೆಹಲಿ: ಭಾರತದ ಪ್ರಪ್ರಥಮ 5ಜಿ ತರಂಗಾಂತರ ಹರಾಜಿನ ಮೊದಲ ದಿನದಂದು ಸರ್ಕಾರವು 1.45 ಲಕ್ಷ ಕೋಟಿ ರೂಪಾಯಿಗಳ ದಾಖಲೆಯ ಬಿಡ್ಡಿಂಗ್ ಅನ್ನು ಸ್ವೀಕರಿಸಿದೆ. ಮೊದಲ ದಿನದಂದು ನಿರ್ಣಾಯಕ 700 MHz ಬ್ಯಾಂಡ್ ಮೊದಲ ಬಾರಿಗೆ ಬಿಡ್ಡಿಂಗ್ ಕಂಡಿತು. ಮಧ್ಯಮ-ಬ್ಯಾಂಡ್ (3.3-3.67 GHz) ಮತ್ತು ಉನ್ನತ-ಬ್ಯಾಂಡ್ (26 GHz) ಏರ್‌ವೇವ್‌ಗಳು ಬಿಡ್ಡುದಾರರಲ್ಲಿ ಬಲವಾದ ಆಸಕ್ತಿಯನ್ನು ಆಕರ್ಷಿಸಿದವು. ಎಲ್ಲಾ ಬಿಡ್‌ಗಳು ಮೂಲ ಬೆಲೆಯಲ್ಲಿವೆ. ಎಲ್ಲಾ ಮೂರು ಖಾಸಗಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗಳು, […]