ಸೈಬ್ರಕಟ್ಟೆ ;ಹುತಾತ್ಮ ಯೋಧರಿಗೆ ನಮನ

ಕಾಶ್ಮೀರದ ಪುಲ್ವಾಮಾ ಪ್ರದೇಶದಲ್ಲಿ ಉಗ್ರಗಾಮಿಗಳ ದಾಳಿಗೆ ತುತ್ತಾಗಿ ಗುರುವಾರ ಹುತಾತ್ಮರಾದ ಭಾರತೀಯ ಸೈನಿಕರಿಗೆ ಶ್ರದ್ಧಾಂಜಲಿ ಸಭೆ  ಶನಿವಾರ ಸಂಜೆ 6ಗಂಟೆಗೆ ಸೈಬ್ರಕಟ್ಟೆ ಮುಖ್ಯ ಪೇಟೆಯಲ್ಲಿ ಸಾರ್ವಜನಿಕರ ವತಿಯಿಂದ ನಡೆಯಿತು.ಈ ಸಂದರ್ಭದಲ್ಲಿ ಹಣತೆ ದೀಪಗಳನ್ನುಬೆಳಗಿ,ಮೌನ ಪ್ರಾರ್ಥನೆಯ ಮೂಲಕ  ಶ್ರದ್ಧಾಂಜಲಿ ಸಲ್ಲಿಸಲಾಯಿತು. ಭಾರತೀಯ ಸೇವಾದಳದ ಉಡುಪಿ ಜಿಲ್ಲಾ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿಯವರು ಯೋಧರ ಕುರಿತ ನುಡಿನಮನ ಸಲ್ಲಿಸಿದರು . ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.