ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರಾಷ್ಟ್ರಪ್ರಶಸ್ತಿ ಸ್ವೀಕರಿಸಿದ ಅನಿರುದ್ದ ಜತ್ಕರ್; ಬಾಳೆ ಬಂಗಾರ ಸಾಕ್ಷ್ಯಚಿತ್ರಕ್ಕೆ ಪ್ರಶಸ್ತಿಯ ಗರಿ

ನವದೆಹಲಿ: 69ನೇ ಸಾಲಿನ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನುಅಕ್ಟೋಬರ್​ 17 ರಂದು ದೆಹಲಿಯಲ್ಲಿ ಪ್ರದಾನ ಮಾಡಲಾಗಿದ್ದು, ಕನ್ನಡ ಚಿತ್ರರಂಗದ ಖ್ಯಾತ ನಟಿ ಭಾರತಿ ವಿಷ್ಣುವರ್ಧನ್​ ಅವರ ಸಾಧನೆ ಹಾಗೂ ಜೀವನದ ಬಗ್ಗೆ ಅನಿರುದ್ದ ಜತ್ಕರ್ ನಿರ್ದೇಶಿಸಿರುವ ‘ಬಾಳೆ ಬಂಗಾರ’ ಸಾಕ್ಷ್ಯಚಿತ್ರಕ್ಕೆ ನಾನ್​-ಫೀಚರ್​ ಫಿಲ್ಮ್​ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ​ ದೊರೆತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅನಿರುದ್ಧ್​ ಜತ್ಕರ್​ ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅನಿರುದ್ದ್, ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರಿಂದ ನನ್ನ […]

ಸಾಹಸಸಿಂಹ ಡಾ. ವಿಷ್ಣುವರ್ಧನ್ ರವರ ಹೊಸ ಮನೆ ‘ವಲ್ಮೀಕ’ ದ ಅದ್ದೂರಿ ಗೃಹಪ್ರವೇಶ

ಬೆಂಗಳೂರು: ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿ ನೆಲೆನಿಂತಿರುವ ಸಹೃದಯ ವ್ಯಕ್ತಿತ್ವದ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಹೊಸ ಮನೆಯ ಗೃಹಪ್ರವೇಶ ಭಾನುವಾರದಂದು ಬಹಳ ಅದ್ದೂರಿಯಾಗಿ ನೆರವೇರಿದೆ. ಮನೆಯ ದ್ವಾರದಲ್ಲೇ ಸಿಂಹದ ಕಂಚಿನ ಪ್ರತಿಮೆ ವಿಷ್ಣುರವರಿಗೆ ಸಮರ್ಪಿತವಾಗಿದ್ದು ಎಲ್ಲರನ್ನೂ ಸ್ವಾಗತಿಸುತ್ತಿದೆ. ಮುಂಭಾಗದಲ್ಲಿ ಕೃಷ್ಣನ ಬೆಳ್ಳಿಯಿಂದ ಅಲಂಕೃತ ಮೂರ್ತಿಯನ್ನಿಡಲಾಗಿದೆ. ಜಯನಗರದ 4ನೇ ಟಿ ಬ್ಲಾಕ್ ನಲ್ಲಿ ನಿರ್ಮಾಣವಾಗಿರುವ ಈ ಮನೆಗೆ ‘ವಲ್ಮೀಕ’ ಎಂದು ಹೆಸರಿಡಲಾಗಿದೆ. ನೂತನ ಗೃಹದ ಗೃಹಪ್ರವೇಶ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡು ಶುಭ ಹಾರೈಸಿದರು. ಹಾಗೆಯೇ […]