ಭಂಡಾರ್ಕಾರ್ಸ್ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ಡಾ.ಸರೋಜ ಎಂ ಇವರಿಗೆ ಅತ್ಯುತ್ತಮ ಜೀವಶಾಸ್ತ್ರ ಉಪನ್ಯಾಸಕ ಪ್ರಶಸ್ತಿ

ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ಡಾ.ಸರೋಜ ಎಂ. ಇವರಿಗೆ ಯುಥ್ ಎಫರ್ಟ್ಸ್ ಫಾರ್ ಸೊಸೈಟಿ ಇವರು ಕೊಡಮಾಡುವ ಅತ್ಯುತ್ತಮ ಜೀವಶಾಸ್ತ್ರ ಉಪನ್ಯಾಸಕ ಪ್ರಶಸ್ತಿ ಮತ್ತು ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಗೌರವ ದೊರೆತಿದೆ. ಇವರಿಗೆ ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದನಂದಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಸಾಹಿತ್ಯಕ್ಕೆ ಭಿನ್ನ ಲೋಕಕ್ಕೆ ಪ್ರವೇಶ ಕೊಡುವ ಸಾಮರ್ಥ್ಯವಿದೆ: ಹೆಚ್.ಬಿ ಇಂದ್ರಕುಮಾರ್

ಕುಂದಾಪುರ: ಸಾಹಿತ್ಯಕ್ಕೆ ಹೊಸದಾದ ಭಿನ್ನ ಲೋಕಕ್ಕೆ ಪ್ರವೇಶ ಕೊಡುವ ಶಕ್ತಿ ಮತ್ತು ಸಾಮರ್ಥ್ಯ ಇದೆ ಎಂದು ಹೆಚ್.ಬಿ ಇಂದ್ರಕುಮಾರ್ ಹೇಳಿದರು. ಅವರು ಆಗಸ್ಟ್ 30ರಂದು ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ನಡೆದ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ತಳಿಕಂಡಿ ಕುಂದಾಪ್ರ ಕನ್ನಡ ಸಾಂಸ್ಕೃತಿಕ ಕೋಶ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಸಾಹಿತ್ಯ ನಮಗೆ ಭಿನ್ನ ನೆಲೆಗಳ ಹುಡುಕಾಟಕ್ಕೆ ಅನುವು ಮಾಡಿಕೊಡುತ್ತದೆ. ಕಥೆ, ಕಾದಂಬರಿ, ಕವನ ಸಂಕಲನಗಳನ್ನು ಬೇರೆ ಬೇರೆ ನೆಲೆಗಳಲ್ಲಿ […]

ಎನ್.ಸಿ.ಸಿ ವಿಶೇಷ ಪ್ರವೇಶ: ಅಖಿಲ ಭಾರತ15ನೇ ರ‍್ಯಾಂಕ್ ಗಳಿಸಿದ ಭರತ್ ಬಾಬು ದೇವಾಡಿಗ

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಎನ್.ಸಿ.ಸಿ ಆರ್ಮಿ ಕೆಡೆಟ್ ಜೆ.ಯು.ಒ (ವಿದ್ಯಾರ್ಥಿ) ಭರತ್ ಬಾಬು ದೇವಾಡಿಗ ಅವರು ಎನ್.ಸಿ.ಸಿ ವಿಶೇಷ ಪ್ರವೇಶದಲ್ಲಿ ಅಖಿಲ ಭಾರತ ರ್ಯಾಂಕಿಂಗ್ ನಲ್ಲಿ 15ನೇ ರ್ಯಾಂಕ್ ಗಳಿಸಿದ್ದಾರೆ. ಇವರು ಕೇಂದ್ರದ ಸಿಬ್ಬಂದಿ ಆಯ್ಕೆ ಮಂಡಳಿ ( ಎಸ್.ಎಸ್.ಸಿ)ಯ 21ಎಸ್.ಎಸ್.ಬಿ ಭೂಪಾಲ್ ನಿಂದ ಇವರನ್ನು ಶಿಫಾರಸು ಮಾಡಲಾಗಿದೆ. ಇವರು ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಿ.ಶುಭಕರಾಚಾರಿ, ಎನ್.ಸಿ.ಸಿ ಸೇನಾ ಅಧಿಕಾರಿ ಅಂಜನ್ ಕುಮಾರ್ ,ಭೋದಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು […]

ಇಂದ್ರ ಕುಮಾರ್ ಹೆಚ್.ಬಿ ಅವರ “ಎತ್ತರ” ಕಾದಂಬರಿಗೆ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ

ಕುಂದಾಪುರ: ಪ್ರಸಕ್ತ ವರ್ಷದ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯು 2022ರಲ್ಲಿ ಮೊದಲ ಆವೃತ್ತಿಯಾಗಿ ಪ್ರಕಟಗೊಂಡ ಇಂದ್ರ ಕುಮಾರ್ ಹೆಚ್.ಬಿ ಅವರ “ಎತ್ತರ” ಕಾದಂಬರಿಗೆ ದೊರೆತಿದೆ. ಕಥೆಗಾರರಾಗಿ, ಕಾದಂಬರಿಕಾರರಾಗಿ ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ಇವರು ಸರಕಾರಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿರಿಯ ಲೇಖಕರಾದ ಡಿ.ಎಸ್.ಚೌಗುಲೆ, ಶ್ರೀನಿವಾಸ ಮೂರ್ತಿ, ಅನುಪಮಾ ಪ್ರಸಾದ್ ಅವರು ನಿರ್ಣಾಯಕರಾಗಿ ಸಹಕರಿಸಿದ್ದಾರೆ. ಪ್ರಶಸ್ತಿಯು ಹದಿನೈದು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಇದೇ ಆಗಸ್ಟ್ ತಿಂಗಳಲ್ಲಿ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆಯುವ ಸಾಹಿತ್ಯ ಸಮಾರಂಭದಲ್ಲಿ […]

ನ್ಯಾಕ್ ಪೀರ್ ತಂಡದಿಂದ ಭಂಡಾರ್ಕಸ್ ಕಾಲೇಜಿಗೆ ಭೇಟಿ

ಕುಂದಾಪುರ: ನ್ಯಾಕ್ ಪೀರ್ ತಂಡವು ಜುಲೈ 14 ಮತ್ತು 15 ರಂದು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ ಭೇಟಿ ನೀಡಿತು. ತಂಡದ ಅಧ್ಯಕ್ಷರಾಗಿ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ. ಅಶೋಕ್ ಬೊಯ್ಟಿ, ತಂಡದ ಸದಸ್ಯ ಸಂಯೋಜಕರಾಗಿ ಕಾಶ್ಮೀರದ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ. ಶಹೀದ್ ರಸೂಲ್ ಮತ್ತು ಅಸ್ಸಾಂನ ಟನ್ಷುಕಿಯಾದ ವಾಣಿಜ್ಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಬಾದಲ್ ಕುಮಾರ್ ಸೇನ್ ಇದ್ದರು. ಸದಸ್ಯರನ್ನು ಸಂಸ್ಥೆಗೆ ಸ್ವಾಗತಿಸಲಾಯಿತು, ಅಲ್ಲಿ ಅವರಿಗೆ ಸಾಂಸ್ಥಿಕ ಮುಖ್ಯಾಂಶಗಳು ಮತ್ತು ವಿವಿಧ ಇಲಾಖೆಗಳಿಂದ ನ್ಯಾಕ್ […]