ಶ್ರೀರಾಮ ಭಜನಾ ಮಂಡಳಿ ಭಜನೆಕಟ್ಟೆ ಕೊಂಡಾಡಿ ಸುವರ್ಣ ಮಹೋತ್ಸ ನಿಮಿತ್ತ ನೆನೆದವರ ಮನೆಯಲ್ಲಿ ಭಜನೆ ಕಾರ್ಯಕ್ರಮ

ಹಿರಿಯಡ್ಕ: ಶ್ರೀರಾಮ ಭಜನಾ ಮಂಡಳಿ ಭಜನೆಕಟ್ಟೆ ಕೊಂಡಾಡಿಯ ಸುವರ್ಣ ಮಹೋತ್ಸವದ ಅಂಗವಾಗಿ ‘ನೆನೆದವರ ಮನೆಯಲ್ಲಿ ಭಜನೆ’ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಕೇಮಾರು ಮಠದ ಈಶ ವಿಠ್ಠಲದಾಸ ಸ್ವಾಮೀಜಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಯಶಸ್ವಿ ಕಾರ್ಯಕ್ರಮವು ಮನೆಮಾತಾಗಿದೆ. ಮದರಂಗಿ, ಹುಟ್ಟುಹಬ್ಬ, ಮದುವೆಯ ವಾರ್ಷಿಕೋತ್ಸವ ಹಾಗೂ ಹಬ್ಬ ಹರಿದಿನಗಳಲ್ಲಿಯೂ ಭಜನೆ ನಡೆಸಿದ್ದು 60ನೇ ದಿನದ ಭಜನೆಯು ಆನಂದ ಶೆಟ್ಟಿ ಕೊಂಡಾಡಿ ಇವರ ಮನೆಯಲ್ಲಿ ನಡೆಯಿತು. ಭಜನೆ ನಡೆದ ಪ್ರತಿ ಮನೆಯವರಿಗೆ ಪುರಂದರದಾಸರ ಒಂದು ಭಜನೆ ಪುಸ್ತಕವನ್ನು ನೀಡಿ ಶ್ರೀ ರಾಮ […]

ಕಾರ್ಕಳ: ಭಜನಾ ಒಕ್ಕೂಟದ ಅಧ್ಯಕ್ಷರಿಗೆ ಸನ್ಮಾನ

ಕಾರ್ಕಳ: ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಮತ್ತು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ನೇತೃತ್ವದಲ್ಲಿ ಅಬ್ಬನಡ್ಕದಲ್ಲಿ ಜರಗಿದ 17ನೇ ವರ್ಷದ ಅಬ್ಬನಡ್ಕ ಸಾರ್ವಜನಿಕ ಶ್ರೀ ಮಹಾಶಿವರಾತ್ರಿ ಸಂಭ್ರಮ ಹಾಗೂ ದ್ವಿತೀಯ ವರ್ಷದ ಭಜನೋತ್ಸವ ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕು ಭಜನಾ ಒಕ್ಕೂಟದ ಅಧ್ಯಕ್ಷ ಶ್ರೀಕಾಂತ್ ಪ್ರಭು ಪಳ್ಳಿ ಹಾಗೂ ಕಾರ್ಕಳ ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಯರ್ಲಪಾಡಿ ಇವರನ್ನು ಸನ್ಮಾನಿಸಲಾಯಿತು.

ಕಲ್ಯಾಣಪುರ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಗರ ಭಜನೆ ಸಂಪನ್ನ

ಕಲ್ಯಾಣಪುರ: ಶ್ರೀ ವೆಂಕಟರಮಣ ದೇವಸ್ಥಾನ ಶ್ರೀ ಕ್ಷೇತ್ರ ಕಲ್ಯಾಣಪುರದಲ್ಲಿ 94ನೇ ಭಜನಾ ಸಪ್ತಾಹ ಅಂಗವಾಗಿ ನಗರ ಭಜನೆ ಶನಿವಾರ ಸಂಜೆ ದೇವಾಲಯದಿಂದ ಹೊರಟು ಮುಖ್ಯ ರಸ್ತೆಯಲ್ಲಿ ಸಾಗಿ ಸ್ವರ್ಣ ನದಿಗೆ ತೀರಕ್ಕೆ ತೆರಳಿ, ಅಲ್ಲಿಂದ ದೇವಾಲಯಕ್ಕೆ ಬಂದು ಸಂಪನ್ನಗೊಂಡಿತು. ಭಕ್ತರು ನೀಡಿದ ಫಲ ವಸ್ತುಗಳನ್ನು ದೇವರಿಗೆ ಅರ್ಪಿಸಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಅನಂತ ಪದ್ಮನಾಭ ಕಿಣಿ , ವಿನೋದ ಕಾಮತ್, ಡಾ. ಪಾಂಡುರಂಗ ಕಿಣಿ, ದೇವಳದ ಅರ್ಚಕ ಜಯದೇವ ಭಟ್, ಗಣಪತಿಭಟ್, […]

ಕಲ್ಯಾಣಪುರ: ಶ್ರೀ ವೆಂಕಟರಮಣ ದೇವಸ್ಥಾನದ 94ನೇ ಭಜನಾ ಸಪ್ತಾಹ ಮಂಗಲೋತ್ಸವ ಸಂಪನ್ನ

ಕಲ್ಯಾಣಪುರ: ಇಲ್ಲಿನ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 94ನೇ ಭಜನಾ ಸಪ್ತಾಹ ಮಂಗಲೋತ್ಸವ ಆದಿತ್ಯವಾರ ಸಂಪನ್ನಗೊಂಡಿತು. ದೇವಳದ ಆಡಳಿತ ಮೊಕ್ತೇಸರ ಅನಂತ ಪದ್ಮನಾಭ ಕಿಣಿಯವರ ಮಾರ್ಗದರ್ಶನದಲ್ಲಿ 1 ವಾರಗಳ ಕಾಲ ಊರ ಪರವೂರ ಸಂತ ಮಂಡಳಿ ಸಹಕಾರದೊಂದಿಗೆ ಅಹೋರಾತ್ರಿ ಭಜನೆ ಜರುಗಿತು. ದೇವಳದ ಪ್ರಧಾನ ಅರ್ಚಕ ಜಯದೇವ ಭಟ್ ಮತ್ತು ಗಣಪತಿ ಭಟ್ ಧಾರ್ಮಿಕ ಪೂಜಾ ವಿಧಾನಗಳನ್ನು ನೆರವೇರಿಸಿದರು. ಭಜನಾ ಸಮಿತಿ ಅಧ್ಯಕ್ಷ ಕೆ ತುಳಸೀದಾಸ್ ಕಿಣಿ, ಉಪಾಧ್ಯಕ್ಷ ಸೀತಾರಾಮ್ ಭಟ್ ಅರವಿಂದ ಬಾಳಿಗಾ, ದತ್ತತ್ರೇಯ ಕಿಣಿ, ವಿನೋದ್ […]

ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ನಗರ ಭಜನಾ ಕಾರ್ಯಕ್ರಮ

ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಮಂಗಳವಾರದಂದು 122 ನೇ ಭಜನಾ ಸಾಪ್ತಾಹ ಅಂಗವಾಗಿ ನಗರ ಭಜನೆ ನಡೆಯಿತು ದೇವಳದಿಂದ ಹೊರಟ ನಗರ ಭಜನೆಯಲ್ಲಿ ನೂರಾರು ಯುವಕರು ಹಾಗೂ ಸಮಾಜ ಭಾಂದವರು ಹರಿನಾಮ ಸ್ಮರಣೆ ಮಾಡುತ್ತಾ ಉಡುಪಿ ಮುಖ್ಯ ರಸ್ತೆಯವರೆಗೆ ಸಾಗಿ ಪುನಃ ದೇವಳಕ್ಕೆ ವಾಪಾಸಾಗಿ ಭಜನೆಯನ್ನು ಸಮಾಪ್ತಿಗೊಳಿಸಿದರು.