ಜರ್ಮನಿಯಲ್ಲಿ 1.5 ವರ್ಷದ ಮಗುವಿಗಾಗಿ ಮೊರೆಯಿಡುತ್ತಿರುವ ಭಾರತೀಯ ದಂಪತಿಗಳು: ಟ್ವಿಟರ್ ನಲ್ಲಿ ಬಾಯ್ ಕಾಟ್ ಜರ್ಮನಿ ಟ್ರೆಂಡ್
ರ್ಲಿನ್: ಅಹಮದಾಬಾದ್ ಮೂಲದ ಪೋಷಕರಾದ ಭಾವೇಶ್ ಮತ್ತು ಧಾರಾ ಶಾ ಕಳೆದ 1.5 ವರ್ಷದಿಂದ ತಮ್ಮ ಮಗಳು ಅರಿಹಾ ನನ್ನು ವಾಪಾಸು ಕೊಡುವಂತೆ ಜರ್ಮನಿ ಸರಕಾರವನ್ನು ಅಂಗಲಾಚುತ್ತಿದ್ದಾರೆ. ಆದರೆ, ಅಲ್ಲಿನ ಮಕ್ಕಳ ರಕ್ಷಣಾ ಸಂಸ್ಥೆಯು ಪೋಷಕರಿಂದ ಮಗುವನ್ನು ಬಲವಂತವಾಗಿ ಕಿತ್ತುಕೊಂಡು ಪ್ರಕರಣವಿಲ್ಲದಿದ್ದರೂ ಮಗುವನ್ನು ಹಿಂತಿರುಗಿಸದೆ ದಿನದೂಡುತ್ತಿದೆ. ಅರಿಹಾ ತಂದೆ ಕೆಲಸದ ವೀಸಾದಲ್ಲಿ ಯುರೋಪಿಯನ್ ರಾಷ್ಟ್ರವಾದ ಜರ್ಮನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅರಿಹಾಳ ಅಜ್ಜಿ 2021ರ ಸೆಪ್ಟೆಂಬರ್‌ನಲ್ಲಿ ಆಕಸ್ಮಿಕವಾಗಿ ಮಗುವಿಗೆ ನೋವುಂಟು ಮಾಡಿದ್ದರು ಎನ್ನುವ ಕಾರಣಕ್ಕೆ […]