ಯುವತಿಗೆ ಅಶ್ಲೀಲ ವೀಡಿಯೋ ತೋರಿಸಿದ ಯುವಕನ ಬಂಧನ 

ಮಂಗಳೂರು: ಮಂಗಳೂರಿನಲ್ಲಿ ಯುವತಿಗೆ ಅಶ್ಲೀಲ ವಿಡಿಯೋ ತೋರಿಸಿದ ಯುವಕನನ್ನು ಬಂಧಿಸಲಾಗಿದೆ. ಬೆಂದೂರು ಮರ್ಕೆರಾ ಹಿಲ್ಸ್ ನಿವಾಸಿ ಡೇವಿನ್ ಪಿಂಟೋ (29) ಬಂಧಿತ ಅರೋಪಿ. ಈತ ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯನ್ನು ಕರೆದು ಮೊಬೈಲ್ ನಿಂದ ಅಶ್ಲೀಲ ವಿಡಿಯೋ ತೋರಿಸಿದ್ದಾನೆ. ಈ ವೇಳೆ ಯುವತಿಯ ಬೊಬ್ಬೆ  ಹಾಕಿದ್ದಾಳೆ.‌ ಕೂಡಲೇ ಸಾರ್ವಜನಿಕರು ಅರೋಪಿಯನ್ನು ಹಿಡಿದು ಕದ್ರಿ ಪೊಲೀಸರರಿಗೆ ಒಪ್ಪಿಸಿದ್ದಾರೆ. ಮಹಿಳಾ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.