ಯುವ ಬರಹಗಾರ ಪ್ರಸಾದ್ ಶೆಣೈ ಅವರ “ಒಂದು ಕಾಡಿನ ಪುಷ್ಪಕ ವಿಮಾನ” ಕೃತಿ ಬಿಡುಗಡೆ
ಕಾರ್ಕಳ: ಮನೆಯಲ್ಲಿ ತಾಯಿ ನೆಮ್ಮದಿಯಾಗಿದ್ದರೆ ಇಡೀ ಮನೆ, ಮನೆಯ ವಾತಾವರಣ ಸುಖ ಶಾಂತಿಯಿಂದಿರುತ್ತದೆ. ಆದರೆ ತಾಯಿಯೇ ನೆಮ್ಮದಿಯಾಗಿಲ್ಲದಿದ್ದರೆ ಆ ಮನೆಯಲ್ಲೂ ನೆಮ್ಮದಿ ಸಾಧ್ಯವಿಲ್ಲ. ಸದ್ಯ ಪ್ರಕೃತಿ ಅನ್ನೋ ತಾಯಿ ಕಷ್ಟದಲ್ಲಿದ್ದಾಳೆ. ಮನೆ ಹೊತ್ತಿ ಉರಿದರೂ ನಮಗೂ ಆ ಮನೆಯೂ ಸಂಬಂಧವಿಲ್ಲ ಎನ್ನುವ ಪರಿಸ್ಥತಿ ಇದೆ. ಪ್ರಕೃತಿ ತಾಯಿ ಸುಖದಿಂದಿರದಿದ್ದರೆ ಲೋಕಕ್ಕೂ ಸುಖವಿಲ್ಲ ಎಂದು ಪರಿಸರ ತಜ್ಙ, ಲೇಖಕ ಪರಿಸರ ಹೋರಾಟಗಾರರಾದ ದಿನೇಶ್ ಹೊಳ್ಳ ಹೇಳಿದ್ದಾರೆ. ಅವರು ಮಾಳ ಕಾಡಿನ ಪರಿಸರದ ರಮ್ಯ ಮಡಿಲಿನಲ್ಲಿ ಸಾಂಪ್ರದಾಯಿಕ ಜಾರಿಗೆ ಮನೆಯ […]