ಇಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರ್ಮಾ ಅವರಿಂದ ಹರೀಶ್ ಪೂಂಜಾ ಪರ ಪ್ರಚಾರ

ಬೆಳ್ತಂಗಡಿ: ಚುನಾವಣಾ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಎಲ್ಲಾ ಪಕ್ಷಗಳ ಘಟಾನುಘಟಿ ನಾಯಕರು ಕರ್ನಾಟಕದಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಹಿಂದುತ್ವದ ಭದ್ರಕೋಟೆ ಎನಿಸಿಕೊಂಡಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಹಿಂದುತ್ವದ ಬೆಂಕಿ ಚೆಂಡು ಖ್ಯಾತಿಯ ಯೋಗಿ ಆದಿತ್ಯನಾಥ್ ಮತ್ತು ಹಿಮಂತ ಬಿಸ್ವ ಸರ್ಮಾ ಬೃಹತ್ ರೋಡ್ ಶೋ ಗಳಲ್ಲಿ ಭಾಗವಹಿಸಲಿದ್ದಾರೆ.   ಇಂದು ಸಂಜೆ ಬೆಳ್ತಂಗಡಿಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರ್ಮಾ ಅವರ ರೋಡ್ ಶೋ ನಡೆಯಲಿದೆ. ಸಂಜೆ 4 ಗಂಟೆಗೆ ಉಜಿರೆ ಕಾಲೇಜು […]

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ

ಬೆಳ್ತಂಗಡಿ: ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಇವರು ಇಂದು ಧರ್ಮಸ್ಥಳ ಶ್ರೀ ಮಂಜುನಾಥೇಶ್ವರನ ಸನ್ನಿಧಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆಯವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಜೊತೆಗಿದ್ದರು.  

ಏ.17 ರಂದು ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ನಾಮಪತ್ರ ಸಲ್ಲಿಕೆ

ಬೆಳ್ತಂಗಡಿ: ಇಲ್ಲಿನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ರಕ್ಷಿತ್ ಶಿವರಾಂ ಏ.17 ರಂದು ಬೆಳಿಗ್ಗೆ 10 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕೂ ಮುನ್ನ ಅವರು ಮಾಜಿ ಶಾಸಕ ಕೆ.ವಸಂತ ಬಂಗೇರ ಅವರ ಮನೆಗ ತೆರಳಿ ಅಲ್ಲಿಂದ ಬೆಳ್ತಂಗಡಿ ಮಿನಿ ವಿಧಾನ ಸೌಧದ ವರೆಗೆ ಅಭಿಮಾನಿಗಳೊಂದಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.

ಬೆಳ್ತಂಗಡಿ: ವಿಷಪೂರಿತ ಅಣಬೆ ಸೇವನೆಗೆ ಬಲಿಯಾಯ್ತು ಅಪ್ಪ-ಮಗನ ಜೀವ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟುವಿನಲ್ಲಿ ವಿಷಪೂರಿತ ಅಣಬೆ ಸೇವಿಸಿದ್ದರಿಂದ ಅಪ್ಪ ಮಗ ಮೃತಪಟ್ಟ ಘಟನೆ ಮಂಗಳವಾರದಂದು ನಡೆದಿದೆ. ಧರ್ಮಸ್ಥಳಕ್ಕೆ ಸಮೀಪದ ಪುದುವೆಟ್ಟು ಗ್ರಾಮದ ಮೀಯಾರುಪಾದೆ ಕೇರಿಮಾರು ನಿವಾಸಿಗಳಾದ ಗುರುವ(80) ಮತ್ತು ಅವರ ಪುತ್ರ ಓಡಿಯಪ್ಪ(41) ಮೃತಪಟ್ಟವರು. ಅಡುಗೆಗೆಂದು ಮಾಡಿದ್ದ ಅಣಬೆ ಪದಾರ್ಥ ವಿಷವಾಗಿ ಪರಿಣಮಿಸಿ ಈ ಸಾವು ಸಂಭವಿಸಿರಬಹದು ಎಂದು ಮೃತರ ಮನೆಯವರು ಧರ್ಮಸ್ಥಳ ಠಾಣೆಗೆ ನೀಡಿದ ದೂರಿನಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ವಯೋವೃದ್ಧ ಗುರುವ ಹಾಗೂ ಅವರ ಇಬ್ಬರು ಪುತ್ರರಾದ ಕರ್ತ […]

ಬೆಳ್ತಂಗಡಿಯ ಯುವಕ‌ ಕತರ್ ನಲ್ಲಿ ಸಾವು: ಕಂಪ್ರೆಶರ್ ಸಿಡಿದು ದುರ್ಘಟನೆ 

ಮಂಗಳೂರು: ಕತಾರ್ ನಲ್ಲಿ ಕಂಪ್ರೆಶರ್ ಸಿಡಿದು ಮಂಗಳೂರು ಯುವಕ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಪುರಿಯ ನಿವಾಸಿ ಸಂದೇಶ್ ಶೆಟ್ಟಿ (30), ಮೃತಪಟ್ಟ ಯುವಕ. ಕತಾರ್ ನ ಕಂಪೆನಿಯೊಂದರಲ್ಲಿ ಎಸಿ ಮತ್ತು ಚಿಲ್ಲರ್ ಪ್ಲಾಂಟ್ ಮೇಲ್ವಿಚಾರಕರಾಗಿದ್ದರು. ಅಲ್-ಸಾದ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಚಿಲ್ಲರ್ ಪ್ಲಾಂಟ್ ದುರಸ್ತಿ ಮಾಡುತ್ತಿದ್ದಾಗ ಘಟನೆ ಸಂಭವಿಸಿದೆ. ಮೃತದೇಹವನ್ನು ಹುಟ್ಟೂರಿಗೆ ತರಲು ಪ್ರಯತ್ನ ನಡೆಸಲಾಗುತ್ತಿದೆ ಎನ್ನಲಾಗಿದೆ. ಸಂದೇಶ್ ರ ಪತ್ನಿಯೂ ಸಹ ವಿಸಿಟಿಂಗ್ ವಿಸಾದಲ್ಲಿ ಇತ್ತೀಚೆಗಷ್ಟೆ ಕತಾರ್ ಗೆ ತೆರಳಿದ್ದರು.