ಬೆಳ್ತಂಗಡಿ ಪಿಲ್ಯದ ಬಳಿ ರಸ್ತೆ ಕುಸಿತ: ಕಾರ್ಕಳ- ಬೆಳ್ತಂಗಡಿ ರಸ್ತೆ ಸಂಚಾರ ಸ್ಥಗಿತ
ಬೆಳ್ತಂಗಡಿ: ತಾಲೂಕಿನಾದ್ಯಂತ ಧಾರಾಕಾರ ಮಳೆ ಜಾಸ್ತಿಯಾಗುತ್ತಿದ್ದು ಇದೀಗ ಬೆಳ್ತಂಗಡಿ-ಕಾರ್ಕಳ ಸಂಪರ್ಕಿಸುವ ರಸ್ತೆ ಕೂಡ ಮಳೆಗೆ ಗಡ ಗಡ ನಡುಗಿದೆ. ಅಳದಂಗಡಿಯ ಸಮೀಪದ ಪಿಲ್ಯ ಎಂಬಲ್ಲಿ ರಸ್ತೆ ಸಂಪೂರ್ಣ ಶಿಥಿಲಗೊಂಡಿದ್ದು ಕೆಲವೆಡೆ ರಸ್ತೆ ಕುಸಿಯುತ್ತಿದೆ.ರಸ್ತೆ ದಾಟಲು ಹರಸಾಹಸ ಪಟ್ಟು ಕೆಲವೊಂದು ವಾಹನಗಳು ರಸ್ತೆಯಲ್ಲೇ ಹೂತುಹೋಗಿದೆ. ಇದೀಗ ಬೆಳ್ತಂಗಡಿ-ಕಾರ್ಕಳ ರಸ್ತೆ ಸಂಚಾರ ಸದ್ಯಕ್ಕೆ ಸ್ಥಗಿತಗೊಂಡಿದೆ.ಇದೀಗ ರಸ್ತೆಯಲ್ಲಿ ಬಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ವರದಿ:ಚಿತ್ರ: :ಇಫಾಜ್ ಶೇಕ್, ಅಳದಂಗಡಿ