ಬೆಳ್ತಂಗಡಿ: ಮನೆ ಅಂಗಳದಲ್ಲಿ ಕಾರಿನಡಿಗೆ ಸಿಲುಕಿ ಬಾಲಕ ಮೃತ್ಯು.

ಬೆಳ್ತಂಗಡಿ: ಮನೆ ಅಂಗಳದಲ್ಲಿ ಕೂತಿದ್ದ ಬಾಲಕಆಕಸ್ಮಿಕವಾಗಿ ಕಾರಿನಡಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಕೊಕ್ಕಡದ ಮಲ್ಲಿಗೆ ಮಜಲ್ ಎಂಬಲ್ಲಿ ಅ.1 ರಂದು ಮಂಗಳವಾರ ನಡೆದಿದೆ. ಮಲ್ಲಿಗೆ ಮಜಲ್ ನಿವಾಸಿ ಅಬ್ದುಲ್ ಹಮೀದ್ ಎಂಬವರ ಪುತ್ರ 4ನೇ ತರಗತಿಯ ವಿದ್ಯಾರ್ಥಿ ನವಾಫ್ ಇಸ್ಮಾಯಿಲ್ (10) ಮೃತ ಬಾಲಕ. ಮನೆಯ ಅಂಗಳದಲ್ಲಿದ್ದ ಕಾರನ್ನು ತೆಗೆಯುವ ವೇಳೆ ಆಕಸ್ಮಿಕವಾಗಿ ಬಾಲಕ ಕಾರಿನಡಿಗೆ ಸಿಲುಕಿದ್ದು, ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಕೊಂಡೊಯ್ದರೂ ಆ ವೇಳೆಗೆ ಆತ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ.