ಉಚ್ಚಿಲ ಬೆಳಪು ವ್ಯವಸಾಯ ಸಹಕಾರಿ ಸಂಘದಲ್ಲಿ ಬಹು ಮಹಡಿ ಸಹಕಾರಿ ಮಹಲ್ ಸ್ಥಾಪನೆ: ದೇವಿಪ್ರಸಾದ್ ಬೆಳಪು
ಉಚ್ಚಿಲ: ಬೆಳಪು ವ್ಯವಸಾಯ ಸಹಕಾರಿ ಸಂಘವು 2021-22ನೇ ಸಾಲಿನಲ್ಲಿ ಗಣನೀಯ ಅಭಿವೃದ್ಥಿ ಸಾಧಿಸಿದ್ದು, ವಾರ್ಷಿಕ ವ್ಯವಹಾರ 200 ಕೋಟಿ ದಾಟಿದ್ದು ಕಳೆದ ವರ್ಷದಿಂದ ಮೂರು ಪಟ್ಟು ವ್ಯವಹಾರವನ್ನು ವೃದ್ಧಿಸಿ ಗ್ರಾಮೀಣ ಪ್ರದೇಶದಲ್ಲಿ ಸಂಘವು ಉನ್ನತ ಸಾಧನೆಯನ್ನು ಮಾಡಿರುತ್ತದೆ. ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಯಶಸ್ವಿ ಸಂಘ ಇದಾಗಿದ್ದು ಮುಂದಿನ ವರ್ಷ 300 ಕೋಟಿ ರೂ.ವ್ಯವಹಾರ ನಡೆಸುವ ಗುರಿ ಹೊಂದಿದೆ. ಈ ವರ್ಷ 5.23 ಕೋಟಿ ಸರ್ವಕಾಲಿಕ ಲಾಭ ಗಳಿಸಿದ್ದು ವಾರ್ಷಿಕ ನಿವ್ವಳ ಲಾಭ 49 ಲಕ್ಷವಾಗಿರುತ್ತದೆ. ಸದಸ್ಯರಿಗೆ 12% […]