ಸಮಾಜ ಸೇವೆಗೆ ಸಹಾಯ ಮಾಡುವ ಮನಸ್ಸಿದ್ದರೆ ಸಾಕು: ವಿಶು ಶೆಟ್ಟಿ 

ಉಡುಪಿ: ನಿಸ್ವಾರ್ಥ ಸೇವೆ ಮಾಡಿದರೆ ನಮಗೆ ಹೇಗಾದರೂ ಪ್ರತಿಫಲ ಸಿಗುತ್ತದೆ. ಸಮಾಜ ಸೇವೆಗೆ ಸಮಾಜ ಸೇವಕನೇ ಆಗಬೇಕಾಗಿಲ್ಲ. ಸಹಾಯ ಮಾಡುವ ಮನಸ್ಸಿದ್ದರೆ ಸಾಕು. ಕಷ್ಟಕ್ಕೆ ಮಿಡಿಯುವ ಹೃದಯವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು ಎಂದು ಸಮಾಜ ಸೇವಕ ವಿಶುಶೆಟ್ಟಿ ಅಂಬಲಪಾಡಿ ಹೇಳಿದರು. ಬಿಯಿಂಗ್‌ ಸೋಶಿಯಲ್‌ ವತಿಯಿಂದ ಶ್ರೀ ತ್ರಿಕಣ್ಣೇಶ್ವರೀವಾಣಿ ಕನ್ನಡ ಮಾಸ ಪತ್ರಿಕೆಯ ಸಹಭಾಗಿತ್ವದಲ್ಲಿ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಆಯೋಜಿಸಿದ ಕೂತು ಮಾತನಾಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನೋವಲ್ಲಿರುವವರ ಕಣ್ಣೀರು ಒರೆಸುವುದೇ ನನ್ನ ಸುಖ […]