ರಂಗು ರಂಗಾಯಿತು ಬಯಲು ರಂಗಮಂದಿರ: ಮಹಿಳಾ ಶಕ್ತಿಯ ಅನಾವರಣದ ಪವರ್ ಪರ್ಬಕ್ಕೆ ಇಂದು ಕೊನೆ ದಿನ
ಉಡುಪಿ: ಮಹಿಳೆಯರಿಂದ, ಮಹಿಳೆಯರಿಗಾಗಿ, ಮಹಿಳಿಯರಿಗೋಸ್ಕರ ನಡೆಯುತ್ತಿರುವ ಪವರ್ ಪರ್ಬದಲ್ಲಿ ಕಳೆದೆರಡು ದಿನಗಳಿಂದ ಮಹಿಳಾ ಶಕ್ತಿಯ ಅನಾವರಣವಾಗುತ್ತಿದೆ. ಬೀಡಿನಗುಡ್ಡೆಯ ಮಹಾತ್ಮಾ ಗಾಂಧಿ ಬಯಲು ರಂಗಮಂದಿರವು ರಂಗು ರಂಗಾಗಿದೆ. 100ಕ್ಕೂ ಹೆಚ್ಚು ಮಳಿಗೆಗಳು, ತರಹೇವಾರಿ ಖಾದ್ಯ ಉತ್ಪನ್ನಗಳು, ಆಟದ ವಿಭಾಗಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರನ್ನು ರಂಜಿಸುತ್ತಲಿವೆ. ಇಂದು ಪವರ್ ಪರ್ಬದ ಕೊನೆಯ ದಿನವಾಗಿದ್ದು, ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಬಳಿಕ 7 ಗಂಟೆಗೆ ಪ್ರಶಾಂತ್ ಮತ್ತು ತಂಡದವರಿಂದ ಸಮೂಹ ನೃತ್ಯ ಕಾರ್ಯಕ್ರಮವಿದೆ. ವಸ್ತುಪ್ರದರ್ಶನವು ಬೆಳಿಗ್ಗೆ 10 […]
ಮಹಿಳಾ ಉದ್ಯಮಿಗಳ ಪವರ್ ನ ಅನಾವರಣ: ಪವರ್ ಪರ್ಬ ವಿದ್ಯುಕ್ತ ಉದ್ಘಾಟನೆ
ಉಡುಪಿ: ಬಹುನಿರೀಕ್ಷಿತ ಮಹಿಳಾ ಉದ್ಯಮಿಗಳ ಬೃಹತ್ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ “ಪವರ್ ಪರ್ಬ ” ವನ್ನು ನಿವೃತ್ತ ಜಿಲ್ಲಾಧಿಕಾರಿ ಕಲ್ಪನಾ ಗೋಪಾಲನ್ ಉದ್ಘಾಟಿಸಿದರು. ಬೀಡಿನಗುಡ್ಡೆ ಮಹಾತ್ಮಾ ಗಾಂಧಿ ಬಯಲು ರಂಗ ಮಂದಿರದಲ್ಲಿ ಮಾರಾಟ ಮಳಿಗೆಗಳನ್ನು ಹಾಕಲಾಗಿದ್ದು ಇದರ ಉದ್ಘಾಟನೆಯನ್ನು ಶಾಸಕ ರಘುಪತಿ ಭಟ್ ನೆರವೇರಿಸಿದರು. ಈ ಬೃಹತ್ ಮೇಳದಲ್ಲಿ 125ಕ್ಕೂ ಹೆಚ್ಚು ಉತ್ಪನ್ನಗಳ/ ಸೇವೆಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ನೀಡಲಾಗಿದೆ . ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಲು ವಿಶಿಷ್ಟ ಆಹಾರ ಮಳಿಗೆಗಳು, ವಿಶೇಷ ಆಟದ […]
ಪವರ್ ಪರ್ಬದಲ್ಲಿ ಪ್ರತಿಭೆ ಪ್ರದರ್ಶಿಸಲು ಉತ್ತಮ ಅವಕಾಶ: ಸ್ಪರ್ಧೆಯಲ್ಲಿ ಭಾಗವಹಿಸಿ ನಗದು ಬಹುಮಾನ ಗೆಲ್ಲಿ
ಉಡುಪಿ: ಇಲ್ಲಿನ ಬೀಡಿನಗುಡ್ಡೆಯ ಮಹಾತ್ಮಾ ಗಾಂಧಿ ಬಯಲು ರಂಗಮಂದಿರದಲ್ಲಿ ಮಹಿಳಾ ಉದ್ಯಮಿಗಳಿಂದಲೇ ನಡೆಸಲ್ಪಡುವ ಪವರ್ ಪರ್ಬದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಜ.14-15 ರಂದು ನಡೆಯಲಿರುವ ಈ ಸ್ಪರ್ಧೆಗಳಲ್ಲಿ ಆಸಕ್ತರು ಭಾಗವಹಿಸಿ ನಗದು ಬಹುಮಾನಗಳನ್ನು ಗೆಲ್ಲಬಹುದು. ಜ.14 ಸಮೂಹ ನೃತ್ಯ ಸ್ಪರ್ಧೆ ಸಮಯ ಸಂಜೆ 6 ಗಂಟೆ ನಿಯಮಗಳು # ಎಲ್ಲಾ ವಯಸ್ಸಿನವರಿಗೂ ಮುಕ್ತ ಅವಕಾಶ # ಒಂದು ತಂಡದಲ್ಲಿ ಕನಿಷ್ಟ 4 ಮತ್ತು ಗರಿಷ್ಟ 10 ಜನರಿರಬೇಕು # ಯಾವುದೇ ನೃತ್ಯ ಪ್ರಕಾರವನ್ನು […]
ಜ.13 ರಿಂದ 15 ಪವರ್ ಪ್ರಸ್ತುತ ಪಡಿಸುವ 4 ನೇ ಆವೃತ್ತಿಯ ಪವರ್ ಪರ್ಬ 2023- ಗ್ರಾಂಡ್ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ
ಉಡುಪಿ: ಪವರ್ ಪರ್ಬವು ಪವರ್ ಸಂಸ್ಥೆಯಿಂದ ಉಡುಪಿಯಲ್ಲಿ ಆಯೋಜಿಸಲ್ಪಡುತ್ತಿರುವ ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು ಮಹಿಳಾ ಉದ್ಯಮಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಪ್ರಮುಖ ಉದ್ದೇಶವನ್ನು ಹೊಂದಿದೆ ಎಂದು ಪವರ್ ಸಂಸ್ಥೆಯ ಅಧ್ಯಕ್ಷೆ ಪೂನಂ ಶೆಟ್ಟಿ ಹೇಳಿದರು. ಅವರು ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪವರ್ ಪರ್ಬ ಉಡುಪಿಯ ಜನರ ಆಕರ್ಷಣೆಯ ಹಾಗೂ ಮೆಚ್ಚುಗೆಯ ಕಾರ್ಯಕ್ರಮವಾಗಿದ್ದು ಉತ್ತಮ ಜನ ಸ್ಪಂದನೆಗೆ ಪಾತ್ರವಾಗಿದೆ. ಮಹಿಳಾ ಉದ್ಯಮಿಗಳಿಂದಲೇ ಉತ್ಪಾದಿಸಿ ಮಾರುಕಟ್ಟೆ ಮಾಡಲ್ಪಡುತ್ತಿರುವ ವಿಭಿನ್ನ ಉತ್ಪನ್ನಗಳು ಮತ್ತು ಸೇವೆಗಳ ಪರಿಚಯ ಹಾಗೂ ಮಾಹಿತಿಯನ್ನು […]
ಬೀಡಿನಗುಡ್ಡೆ: ಜನವರಿ 13, 14, 15 ರಂದು ಪವರ್ ಪರ್ಬ-2023 ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ
ಉಡುಪಿ: ಮಹಿಳಾ ಉದ್ಯಮಿಗಳ ವೇದಿಕೆಯಾಗಿರುವ ಪವರ್ ಉಡುಪಿಯು ಸ್ವ-ಉದ್ಯಮದೊಂದಿಗೆ ಬೆಳೆಯುತ್ತಿರುವ ಮಹಿಳಾ ಉದ್ಯಮಿಗಳ ಹಾಗೂ ಕುಟುಂಬ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರ ಒಗ್ಗೂಡುವಿಕೆಯೊಂದಿಗೆ 2009ರಲ್ಲಿ ಪ್ರಾರಂಭಗೊಂಡಿತು. ಇದೀಗ ಸಂಸ್ಥೆಯು ವಿಭಿನ್ನ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಉದ್ಯಮಿಗಳ ಪಾಲ್ಗೊಳ್ಳುವಿಕೆ ಯೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಪವರ್ ಪರ್ಬವು ಪವರ್ ಸಂಸ್ಥೆಯಿಂದ ಉಡುಪಿಯಲ್ಲಿ ಆಯೋಜಿಸಲ್ಪಡುತ್ತಿರುವ ಅದ್ದೂರಿ ಕಾರ್ಯಕ್ರಮವಾಗಿದ್ದು ಮಹಿಳಾ ಉದ್ಯಮಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಪ್ರಮುಖ ಉದ್ದೇಶವನ್ನು ಹೊಂದಿದೆ. 2016ರಲ್ಲಿ ಆರಂಭಗೊಂಡ ಈ ಕಾರ್ಯಕ್ರಮವು 2018 ಹಾಗೂ 2020ರಲ್ಲಿ ಅತ್ಯುತ್ತಮ ರೀತಿಯಲ್ಲಿ ಮೂಡಿಬಂದಿದ್ದು […]