ಜಿಲ್ಲಾ ಬಾಲಭವನದಲ್ಲಿ ಪ್ರತಿ ಭಾನುವಾರದಂದು ಉಚಿತ ಸೃಜನಾತ್ಮಕ ಚಟುವಟಿಕಾ ಕಾರ್ಯಕ್ರಮಗಳು

ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಬನ್ನಂಜೆಯ ಜಿಲ್ಲಾ ಬಾಲಭವನದಲ್ಲಿ 5 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಆಗಸ್ಟ್ 21 ರಿಂದ ಪ್ರತಿ ಭಾನುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 12 ರ ವರೆಗೆ ಸೃಜನಾತ್ಮಕ ಚಟುವಟಿಕೆಗಳಾದ ಚಿತ್ರಕಲೆ, ಕರಕುಶಲ, ನೃತ್ಯ, ರಂಗಚಟುವಟಿಕೆ, ಸಾಹಿತ್ಯ, ಯೋಗ, ಸಂಗೀತ ತರಗತಿಗಳನ್ನು ಉಚಿತವಾಗಿ ನಡೆಸಲಾಗುವುದು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಬಾಲಭವನ, ಉಡುಪಿ ದೂ.ಸಂಖ್ಯೆ: 0820-2574978, 0820-2574972 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಬನ್ನಂಜೆ: ಸಾಂತ್ವನ ಮಹಿಳಾ ಸಹಾಯವಾಣಿ ಯೋಜನೆ ಕಾರ್ಯಾರಂಭ

ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ ಬರುವ ಸಾಂತ್ವನ ಮಹಿಳಾ ಸಹಾಯವಾಣಿ ಯೋಜನೆಯು ಕಾರ್ಯಾರಂಭಗೊಂಡಿದ್ದು, ಪ್ರಸ್ತುತ ನಗರದ ಬನ್ನಂಜೆ ಹಳೇ ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಈ ಯೋಜನೆಯಡಿ ಮಹಿಳೆಯರ ಮೇಲಾಗುವ ದೌರ್ಜನ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಆಪ್ತಸಮಾಲೋಚನೆ ಹಾಗೂ ಕಾನೂನು ಸಲಹೆಗಳ ಮೂಲಕ ಬಗೆಹರಿಸಲಾಗುವುದು. ಸದ್ರಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರವೇಶಾತಿ: ಬನ್ನಂಜೆ ಕಚೇರಿ ಭಾನುವಾರವೂ ಕಾರ್ಯಾಚರಣೆ

ಉಡುಪಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಉಡುಪಿಯ ಪ್ರಾದೇಶಿಕ ಕೇಂದ್ರದಲ್ಲಿ ಪ್ರಸಕ್ತ ಸಾಲಿನ ಪ್ರವೇಶಾತಿಗಳು ನಡೆಯುತ್ತಿರುವ ಹಿನ್ನೆಲೆ, 2 ನೇ ಮತ್ತು 4ನೇ ಶನಿವಾರ ಹಾಗೂ ಭಾನುವಾರದಂದು ಬನ್ನಂಜೆಯಲ್ಲಿರುವ ಪ್ರಾದೇಶಿಕ ಕೇಂದ್ರ ಕಚೇರಿ ತೆರೆದಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.  

ಡಾ. ವಿ. ಎಸ್. ಆಚಾರ್ಯ ಮತ್ತು ಉಡುಪಿ ನಗರ ಬಸ್ ನಿಲ್ದಾಣದಿಂದ ಸಾರಿಗೆ ಬಸ್ ಗಳ ವೇಳಾಪಟ್ಟಿ

ಉಡುಪಿ: ಉಡುಪಿಯ ಬನ್ನಂಜೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕೆ.ಎಸ್.ಅರ್.ಟಿ.ಸಿ ನಿಗಮದ ಡಾ. ವಿ. ಎಸ್. ಆಚಾರ್ಯ ಬಸ್ ನಿಲ್ದಾಣದಿಂದ ಹಾಗೂ ಉಡುಪಿ ನಗರ ಬಸ್ ನಿಲ್ದಾಣದಿಂದ ಸಾರ್ವಜನಿಕ ಪ್ರಯಾಣಿಕರ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜಿಲ್ಲಾ ವ್ಯಾಪ್ತಿಯ ಸ್ಥಳಗಳಾದ ನೆಲ್ಲಿಕಟ್ಟೆ, ಹೆಬ್ರಿ, ಹೊನ್ನಾಳ, ಮಂಚಕಲ್, ಕಾರ್ಕಳ, ಕೊಕ್ಕರ್ಣೆ, ಹೆರ್ಗ, ಶಿರ್ವ-ಮಂಚಕಲ್, ಹಂಪನಕಟ್ಟೆ, ಕೆಳಸಂಕ, ಮಲ್ಪೆಬೀಚ್, ಪಡುಕೆರೆ, ಇತ್ಯಾದಿ ಸ್ಥಳೀಯ ವಲಯಗಳಲ್ಲಿ ಕಾರ್ಯಾಚರಣೆಯಾಗುತ್ತಿರುವ ಸಾರಿಗೆಗಳ ವೇಳಾ ಪಟ್ಟಿ ಹೀಗಿದೆ. ಉಡುಪಿಯಿಂದ ಕಾರ್ಕಳಕ್ಕೆ 6:55, 10:02, 13:47, 16:51, 8:24, 11:32, 14:45, […]

ಬನ್ನಂಜೆ ಡಾ.ವಿ.ಎಸ್ ಆಚಾರ್ಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಸಾರಿಗೆ ಕಾರ್ಯಾಚರಣೆ ಪ್ರಾರಂಭ

ಉಡುಪಿ: ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಉಡುಪಿಯ ಬನ್ನಂಜೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಡಾ. ವಿ. ಎಸ್. ಆಚಾರ್ಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಉಡುಪಿ ನಗರ, ಜಿಲ್ಲಾ, ಅಂತರ್ ಜಿಲ್ಲಾ ಮತ್ತು ಅಂತರ್‌ರಾಜ್ಯ ವ್ಯಾಪ್ತಿಯ ಸ್ಥಳಗಳಿಗೆ ನಿಗಮದ ಎಲ್ಲಾ ಸಾರಿಗೆಗಳ ಕಾರ್ಯಾಚರಣೆಯನ್ನು ಮಾಡಲಾಗುತ್ತಿದ್ದು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಸದರಿ ಸಾರಿಗೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಬಸ್ ನಿಲ್ದಾಣದಲ್ಲಿ 8 ವಾಣಿಜ್ಯ ಮಳಿಗೆ, 1 ಉಪಹಾರ ಗೃಹ, 3 ರಿಟೇಲ್ ಮಳಿಗೆ, ಒಂದು ದ್ವಿಚಕ್ರ /ಕಾರ್ ಪಾರ್ಕಿಂಗ್ ವ್ಯವಸ್ಥೆ, ಮೊದಲ ಅಂತಸ್ತು ಮತ್ತು […]