ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಅಧ್ಯಯನ ನಡೆಸಿದ ‘ವಿಕ್ರಮ್​’ ಚಿತ್ರ ಹಂಚಿಕೊಂಡ ಇಸ್ರೋ : ಲ್ಯಾಂಡರ್​ನ 3-ಡಿ ಚಿತ್ರ

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿರುವ ವಿಕ್ರಮ್​ ಲ್ಯಾಂಡರ್​ನ ಮೊದಲ 3-ಡಿ ಚಿತ್ರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಂಗಳವಾರ ಬಿಡುಗಡೆ ಮಾಡಿದೆ. ದಕ್ಷಿಣ ಧ್ರುವದಲ್ಲಿ ಇಳಿದ ವಿಕ್ರಮ್​ ಲ್ಯಾಂಡರ್​ ಸುರಕ್ಷಿತವಾಗಿದ್ದು, ಸದ್ಯಕ್ಕೆ ಅಧ್ಯಯನ ನಿಲ್ಲಿಸಿದೆ. ಇದರ 3-ಡಿ ಚಿತ್ರವನ್ನು ಇಸ್ರೋ ಹಂಚಿಕೊಂಡಿದೆ.ಈ ಚಿತ್ರವನ್ನು ಪ್ರಜ್ಞಾನ್​ ರೋವರ್​ ಆಗಸ್ಟ್​ 30 ರಂದು ಸೆರೆಹಿಡಿದಿತ್ತು. ಅನಾಗ್ಲಿಫ್ ಸ್ಟಿರಿಯೊ ಮೂರು ಆಯಾಮಗಳಲ್ಲಿ ಚಿತ್ರವನ್ನು ಸೆರೆಹಿಡಿಯಲಾಗಿದೆ. ಇದು ವಸ್ತು ಅಥವಾ ಭೂಪ್ರದೇಶದ ಸರಳ ದೃಶ್ಯವಾಗಿದೆ. ಇಲ್ಲಿರುವ ಲ್ಯಾಂಡರ್ನ ಚಿತ್ರವನ್ನು NavCam […]