ಲಾಲ್‌ ಬಾಗ್‌ ನಲ್ಲಿ ಫಲಪುಷ್ಪ ಪ್ರದರ್ಶನ ನೋಡಲು ಆಗಮಿಸಿದ ಜನಸಾಗರ

ಬೆಂಗಳೂರು : ಮೋಡ ಕವಿದ ವಾತಾವರಣ, ಮಳೆಯ ನಡುವೆಯೂ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಇಂದು (ಭಾನುವಾರ) ಮುಂಜಾನೆಯಿಂದಲೇ ಜನ ಸಾಗರ ಹರಿದುಬಂದಿತ್ತು.ಇಂದು ಭಾನುವಾರ ರಜಾದಿನವಾದ್ದರಿ೦ದ ಐಟಿ ಉದ್ಯೋಗಿಗಳು, ಶಾಲೆ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಕಿಕ್ಕಿರಿದು ಸೇರಿದ್ದ ಜನರು ಗಾಜಿನ ಮನೆಯೊಳಗೆ ಹಾಗೂ ಹೊರಗೆ ನಿರ್ಮಿಸಲಾದ ಹೂಗಳ ಕಲಾಕೃತಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸೆಲ್ಫಿ ಫೋಟೊಗಳನ್ನು ತೆಗೆದುಕೊಂಡು ಸಂಭ್ರಮಿಸಿದರು ಮೊದಲ ದಿನವಾದ ಶನಿವಾರ 28 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದು, 18.5 ಲಕ್ಷ ರೂ. ಸಂಗ್ರಹವಾಗಿದೆ […]