ಇಸ್ರೊದ 3ನೇ ಹಂತದ ಕಾರ್ಯಾಚರಣೆ ಯಶಸ್ವಿ: ಚಂದ್ರನಿಗೆ 1,500 ಕಿಮೀ ಹತ್ತಿರ ತಲುಪಿದ ಚಂದ್ರಯಾನ-೩

ಬೆಂಗಳೂರು: ಭಾನುವಾರ ನಡೆಸಿದ ಚಂದ್ರನ ಕಕ್ಷೆ ಸೇರ್ಪಡೆಯನ್ನು (ಎಲ್‌ಒಐ) ಒಳಗೊಂಡ ತನ್ನ ಮೂರನೇ ಚಂದ್ರಯಾನ ಕಾರ್ಯಾಚರಣೆಯನ್ನು ಇಸ್ರೊ ಪೂರ್ಣಗೊಳಿಸಿದೆ.ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ನೌಕೆ ಚಂದ್ರನಿಗೆ ಅತ್ಯಂತ ಹತ್ತಿರಕ್ಕೆ ತಲುಪಿದೆ.ಚಂದ್ರಯಾನ-3 ಬಾಹ್ಯಾಕಾಶ ನೌಕೆ ಚಂದ್ರನಿಗೆ ತೀರಾ ಹತ್ತಿರಕ್ಕೆ ತಲುಪಿದ್ದು, ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಇಸ್ರೊ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿತು. ಸೋಮವಾರ ಇಸ್ರೋ ಚಂದ್ರಯಾನ -3 ರ ಎತ್ತರವನ್ನು ಸುಮಾರು 14,000 ಕಿಮೀ ಕಡಿಮೆ ಮಾಡಿ ಚಂದ್ರನಿಗೆ 4,313 ಕಿಮೀಗೆ ಇಳಿಸಿತ್ತು. ಮುಂದಿನ ಚಂದ್ರಯಾನ ಕಾರ್ಯಾಚರಣೆ ಕ್ರಮಗಳು ಆಗಸ್ಟ್ 14 […]