ಮಂದಾರ್ತಿ: ಧಗಧಗಿಸುತ್ತಿದ್ದ ಕಾರಿನಲ್ಲಿದ್ದದ್ದು ಬೆಂಗಳೂರಿನ ಯುವ ಜೋಡಿ; ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು?

ಮಂದಾರ್ತಿ: ಮಂದಾರ್ತಿ ಸಮೀಪದ ಹೆಗ್ಗುಂಜ್ಜೆಯಲ್ಲಿ ಬೆಳ್ಳಂಬೆಳಗ್ಗೆ ಉರಿಯುತ್ತಿದ್ದ ಕಾರಿನಲ್ಲಿ ಜೋಡಿ ಶವಗಳು ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಕೃತ್ಯ ಎಂದು ತನಿಖೆಯಿಂದ ತಿಳಿದು ಬಂದಿದೆ. ಯಶವಂತ್ (23) ಮತ್ತು ಜ್ಯೋತಿ (23) ಆತ್ಮಹತ್ಯೆ ಮಾಡಿಕೊಂಡಿರುವ ಯುವ ಜೋಡಿ. ಇವರು ಬೆಂಗಳೂರಿನ ಆರ್.ಟಿ.ನಗರದವರು ಎನ್ನಲಾಗಿದೆ. ಮುಂಜಾನೆ ಸುಮಾರು 3 ಗಂಟೆ ಸುಮಾರಿಗೆ ಸುಡುತ್ತಿದ್ದ ಕಾರನ್ನು ಕಂಡು ಸ್ಥಳೀಯರು ಬೆಂಕಿ ನಂದಿಸಿದಾಗ ಕಾರಿನೊಳಗೆ ಯುವಕ ಮತ್ತು ಯುವತಿಯ ಶವ ಪತ್ತೆಯಾಗಿದೆ. ಮೃತರು ನಿನ್ನೆ (ಮೇ 21) ಮಂಗಳೂರಿಗೆ ಬಂದು ಹುಸೇನ್ ಎಂಬವರಿಂದ […]