140 ವರ್ಷಗಳಲ್ಲಿಯೇ ಚೀನಾ ರಾಜಧಾನಿ ಬೀಜಿಂಗ್​ನಲ್ಲಿ ಅತ್ಯಧಿಕ ಮಳೆ; 20 ಸಾವು

ಬೆಂಗಳೂರು: ದಕ್ಷಿಣ ಚೀನಾದ ಪ್ರಾಂತ್ಯಗಳಲ್ಲಿ ಭಾರಿ ಅನಾಹುತಕ್ಕೆ ಕಾರಣವಾದ ಡೊಕ್ಸುರಿ ಚಂಡಮಾರುತ ನಂತರ ಉತ್ತರಕ್ಕೆ ಚಲಿಸಿದ್ದರಿಂದ ಸುರಿದ ಮಳೆಯಿಂದಾಗಿ ಉತ್ತರ ಚೀನಾ ಪ್ರವಾಹದಲ್ಲಿ ಮುಳುಗಿದೆ. ಬೀಜಿಂಗ್ ಮತ್ತು ಹೆಬೈ ಪ್ರಾಂತ್ಯದ ಸುತ್ತಮುತ್ತಲಿನ ಪ್ರದೇಶಗಳು ತೀವ್ರ ಪ್ರವಾಹಕ್ಕೆ ತುತ್ತಾಗಿದ್ದು, ನೀರು ಅಪಾಯಕಾರಿ ಮಟ್ಟಕ್ಕೆ ಏರಿದೆ. ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕುಡಿಯುವ ನೀರು ಪೂರೈಸುವ ಪೈಪ್‌ಗಳು ಸಹ ಹಾಳಾಗಿವೆ.ಚೀನಾದ ರಾಜಧಾನಿ ಬೀಜಿಂಗ್​ನಲ್ಲಿ ಭಾರಿ ಮಳೆ ಸುರಿಯುತ್ತಿದೆ. ಕಳೆದ 140 ವರ್ಷಗಳಲ್ಲಿ ದಾಖಲಾದ ಅತಿಹೆಚ್ಚು ಮಳೆ ಇದು […]