ಪ್ರೆಸ್ಟೀಜ್ ಫಾಲ್ಕನ್ ಸಿಟಿ- ಕರಾವಳಿ ಕೂಟ ವತಿಯಿಂದ ಪ್ರಪ್ರಥಮ ನಮ್ಮ ಕರಾವಳಿ ಉತ್ಸವ ಆಯೋಜನೆ: ರಾಜ್ಯ ರಾಜಧಾನಿಯಲ್ಲಿ ತುಳುನಾಡ ಕಲರವ

ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ ಆಚರಣೆಯ ಅಂಗವಾಗಿ, ಇಲ್ಲಿನ ಪ್ರೆಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ಕರಾವಳಿ ಪ್ರದೇಶದ ನಿವಾಸಿಗಳ ಗುಂಪು “ನಮ್ಮ ಕರಾವಳಿ ಉತ್ಸವ” ಆಚರಿಸಿ ಕರಾವಳಿಯ ಕಂಪನ್ನು ರಾಜ್ಯಧಾನಿಯಲ್ಲೂ ಪಸರಿಸಿದೆ. ಪ್ರೆಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್‌ಮೆಂಟ್ 2500 ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದು, ಭಾರತದ ವಿವಿಧ ಭಾಗಗಳಿಂದ 5000 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಇದರಲ್ಲಿ ಸುಮಾರು 350 ಕ್ಕೂ ಹೆಚ್ಚು ಜನರು ಕರಾವಳಿ ಪ್ರದೇಶದವರು. ಕರಾವಳಿಯ ಕಲೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ, ಉತ್ತೇಜಿಸುವ ಮತ್ತು ಆಚರಿಸುವ […]