ನಿಮೆಸುಲೈಡ್ ಮತ್ತು ಪ್ಯಾರೆಸಿಟಮಾಲ್ ಮಾತ್ರೆ ಸೇರಿದಂತೆ 14 ಎಫ್‌ಡಿಸಿ ಔಷಧಿಗಳಿಗೆ ನಿಷೇಧ ಹೇರಿದ ಕೇಂದ್ರ ಸರಕಾರ

ನವದೆಹಲಿ: ನಿಮೆಸುಲೈಡ್ ಮತ್ತು ಪ್ಯಾರೆಸಿಟಮಾಲ್ ಮಾತ್ರೆಗಳು ಮತ್ತು ಕ್ಲೋರ್ಫೆನಿರಮೈನ್ ಮಲೇಟ್ ಮತ್ತು ಕೊಡೈನ್ ಸಿರಪ್ ಸೇರಿದಂತೆ 14 ಫಿಕ್ಸೆಡ್ ಡೋಸ್ ಸಂಯೋಜನೆಯ ಔಷಧಗಳು ಜನರಿಗೆ ಅಪಾಯವನ್ನುಂಟುಮಾಡುತ್ತವೆ ಎಂದು ಕೇಂದ್ರ ಸರ್ಕಾರವು ನಿಷೇಧಿಸಿದೆ. ಈ ಫಿಕ್ಸ್‌ಡ್ ಡೋಸ್ ಕಾಂಬಿನೇಶನ್ (ಎಫ್‌ಡಿಸಿ) ಔಷಧಿಗಳಿಗೆ “ಯಾವುದೇ ಚಿಕಿತ್ಸಕ ಸಮರ್ಥನೆ” ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ಹೇಳಿದೆ. ಎಫ್‌ಡಿಸಿ ಔಷಧಿಗಳೆಂದರೆ ಎರಡು ಅಥವಾ ಹೆಚ್ಚು ಸಕ್ರಿಯ ಔಷಧೀಯ ಪದಾರ್ಥಗಳು ಒಂದು ಸ್ಥಿರ ಅನುಪಾತದಲ್ಲಿ ಸಂಯೋಜನೆಯನ್ನು ಒಳಗೊಂಡಿರುತ್ತದೆ. ತಜ್ಞರ ಸಮಿತಿಯ […]

ಶಾಂತಿ ಕದಡಿದರೆ ಭಜರಂಗದಳ ಮತ್ತು ಆರ್‌ಎಸ್‌ಎಸ್‌ ನಿಷೇಧ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ರಾಜ್ಯದಲ್ಲಿ ಶಾಂತಿ ಕದಡಿದರೆ ಭಜರಂಗದಳ ಮತ್ತು ಆರ್‌ಎಸ್‌ಎಸ್‌ನಂತಹ ಸಂಘಟನೆಗಳನ್ನು ತಮ್ಮ ಸರ್ಕಾರ ನಿಷೇಧಿಸಲಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ಹೇಳಿದ್ದಾರೆ. ಇಲ್ಲಿ ಸುದ್ದಿಗಾರರೊಂದಿಗೆ ಸಂವಾದ ನಡೆಸಿದ ಖರ್ಗೆ, ‘ಬಿಜೆಪಿಗೆ ಕಷ್ಟವಾದರೆ ಪಾಕಿಸ್ತಾನಕ್ಕೆ ಹೋಗಲಿ’ ಎಂದು ಹೇಳಿದರು. ಕರ್ನಾಟಕವನ್ನು ಸ್ವರ್ಗವನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದೇವೆ, ಶಾಂತಿ ಕದಡಿದರೆ ಅದು ಭಜರಂಗದಳ ಅಥವಾ ಆರ್‌ಎಸ್‌ಎಸ್ ಎಂದು ಪರಿಗಣಿಸುವುದಿಲ್ಲ, ಕಾನೂನು ಕೈಗೆತ್ತಿಕೊಂಡಾಗ ಬಜರಂಗದಳ, ಆರ್‌ಎಸ್‌ಎಸ್ ಸೇರಿದಂತೆ ಯಾವುದೇ ಸಂಘಟನೆಗೆ ನಿಷೇಧ ಹೇರಲಾಗುವುದು ಎಂದು […]

ದೇಶದಲ್ಲಿ ಏರುತ್ತಿರುವ ಗೋಧಿ ಬೆಲೆ ತಗ್ಗಿಸಲು ರಫ್ತಿಗೆ ನಿಷೇಧ ಹೇರಿದ ಭಾರತ: ನಿರ್ಧಾರದಿಂದ ಯೂರೋಪಿನಲ್ಲಿ ತಳಮಳ!

ದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಗೋಧಿ ಮತ್ತು ಅದರ ಉತ್ಪನ್ನಗಳ ಬೆಲೆಗಳನ್ನು ತಗ್ಗಿಸುವ ನಿಟ್ಟಿನಲ್ಲಿ ತತ್ಕಾಲದಿಂದಲೇ ಜಾರಿಗೆ ಬರುವಂತೆ ಗೋದಿಯ ರಫ್ತನ್ನು ನಿಷೇಧಿಸಿ ಭಾರತ ಸರಕಾರದ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಆದೇಶ ಹೊರಡಿಸಿದ್ದಾರೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ದ, ಹಾಗೂ ಏರುತ್ತಿರುವ ತಾಪಮಾನದಿಂದಾಗಿ ವಿದೇಶೀ ಮಾರುಕಟ್ಟೆಗಳಲ್ಲಿ ಗೋಧಿಯ ಆವಕ ಕಡಿಮೆಯಾಗುತ್ತಿದ್ದು, ಯೂರೋಪ್, ಅಮೇರಿಕಾ ಮತ್ತಿತರ ದೇಶಗಳಿಗೆ ಗೋಧಿಯನ್ನು ರಫ್ತು ಮಾಡುವ ಉದ್ದೇಶದಲ್ಲಿದ್ದ ಭಾರತವು ಇದೀಗ ರಫ್ತಿನ ಮೇಲೆ ನಿಷೇಧ ಹೇರಿರುವುದು ಯೂರೋಪ್ ಮುಂತಾದ ದೇಶಗಳಲ್ಲಿ ತಳಮಳವನ್ನು […]